‘ಮರೆವಿನ ಬಳ್ಳಿ’ ಸಚ್ಚಿದಾನಂದ ಹೆಗಡೆ ಅವರ ಕಥಾಸಂಕಲನ. ಕಳೆದ ಐದಾರು ವರ್ಷಗಳಲ್ಲಿ ಅವರು ಬರೆದ ಕಥೆಗಳು ಈ ಸಂಕಲನದಲ್ಲಿವೆ. `ಮರೆವಿನ ಬಳ್ಳಿಯನ್ನು ಮೆಟ್ಟಿದರೆ ತಾನು ಬಂದ ಹಾಗೂ ಹೊಗಬೇಕಾದ ದಿಕ್ಕು ಮರೆತು ದಾರಿ ತಪ್ಪುತ್ತದೆ ಎಂಬುದೊಂದು ನಂಬಿಕೆ, ಕನ್ನಡ ಸಾಹಿತ್ಯ ವೈಚಾರಿಕ ಲೋಕ ಕಳೆದ ಮೂರು ದಶಕಗಳ ಕಾಲ `ವಿಸ್ಕೃತಿಯ ತಾತ್ವಿಕತೆಯನ್ನು ವಸಾಹತೋತ್ತರ ಚಿಂತನೆಯಾಗಿ ಚರ್ಚಿಸಿದೆ. ಈ ಸಾಹಿತ್ಯ ಸಂದರ್ಭದಲ್ಲಿ ಮರೆವಿನ ಬಳ್ಳಿ ಕಥೆಯಲ್ಲಿ ಕಾಣುವ ಸಹಜ ನಿರೂಪಣೆಯು ಸಚ್ಚಿದಾನಂದ ಹೆಗಡೆಯವರಿಗೆ ಅಷ್ಟೇ ಸಹಜವಾಗಿ ಒದಗಿ ಬಂದಿದೆ. ಕಥಾನಕ ತನ್ನ ಸಹಜ ನಿರೂಪಣೆಯಲ್ಲಿ ತಾತ್ವಿಕತೆಯನ್ನು ಸೃಜಿಸಬೇಕು ಎಂಬ ತತ್ವಕ್ಕೆ ಅದು ಪೂರಕವಾಗಿದೆ.
ಸಂಕಲನದಲ್ಲಿ ಬದುಕು ಹಾಗೂ ಕಲೆಗಳ ಪರಸ್ಪರ ಸಂಬಂಧದಲ್ಲಿ ಸಚ್ಚಿದಾನಂದ ಹೆಗಡೆ ಬದಲಾಗುತ್ತಿರುವ ನಮ್ಮ ಸಮಾಜ ಹಾಗೂ ವ್ಯಕ್ತಿಗಳ ಸ್ವಭಾವವನ್ನು ಅರಿಯಲು ಪ್ರಯತ್ನಿಸುತ್ತಾರೆ. ತಂತ್ರಜ್ಞಾನ ಹಾಗೂ ಆರ್ಥಿಕ ಪ್ರಗತಿ ಆಗುತ್ತಾ ಹೋದಂತೆ ಮನುಷ್ಯನ ಚಿಂತನಾ ಶಕ್ತಿಯನ್ನು ನುಂಗಿ ಹಾಕುವುದು ಅವರನ್ನು ಆತಂಕಕ್ಕೆ ಒಳಗಾಗಿಸಿದೆ. ಸಂಪತ್ತು ಹೆಚ್ಚಾದಂತೆ ಮನುಷ್ಯ ಅಂತರಂಗ ವಿಕಾಸಕ್ಕೆ ಅನುವಾಗುವ ಬದಲು ತನ್ನೊಳಗೆ ಲೋಭವನ್ನು ತುಂಬಿಕೊಳ್ಳುವುದು ಅವರ ನೋವಿಗೆ ಕಾರಣವಾಗಿದೆ. ಆ ನೋವನ್ನು ವಿವರಿಸುತ್ತಾ ಹೋಗುವ ಕಥೆಗಳು ಈ ಕೃತಿಯಲ್ಲಿ ಸಂಕಲನಗೊಂಡಿವೆ.
ಸಚ್ಚಿದಾನಂದ ಹೆಗಡೆಯವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಇಡಗುಂಜಿಯಲ್ಲಿ, ಭಾರತ ಮತ್ತು ಯುರೋಪ್ಗಳಲ್ಲಿ ಅವರ ಉನ್ನತ ಶಿಕ್ಷಣ. ಅಮೆರಿಕ, ಯುರೋಪ್ ಮತ್ತು ಭಾರತದಲ್ಲಿ ತಮ್ಮ ವೃತ್ತಿ ಮುಂದುವರಿಸಿ ಈಗ ಚೀನಾ ದೇಶದ ಕಾರ್ ಡಿಸೈನ್ ಕಂಪೆನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದು ಅಲ್ಲೇ ವಾಸವಾಗಿದ್ದಾರೆ. 'ಕಾರಂತಜ್ಜನಿಗೊಂದು ಪತ್ರ' ಅವರ ಮೊದಲ ಕಥಾ ಸಂಕಲನ, ಯಕ್ಷಗಾನ ಕೆರೆಮನೆ ಮಹಾಬಲ ಹೆಗಡೆಯವರ ಜೀವನ ಚರಿತ್ರೆ, 'ಮಹಾಬಲ'ದ ಸಹ ಲೇಖಕರು. ಅವರ ಮೊದಲ ಕಥಾ ಸಂಕಲನದ 'ಕಾರಂತಜ್ಜನಿಗೊಂದು ಪತ್ರ' ಕಥೆ ಚಲನಚಿತ್ರವಾಗಿದೆ. ಹಾಗೂ ಅದೇ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 'ಅರಳು ಪ್ರಶಸ್ತಿ' ...
READ MORE