ಡಾ. ವ್ಯಾಸರಾವ್ ನಿಂಜೂರ್ ಅವರ ಎರಡನೆಯ ಕಥಾಸಂಕಲನ 'ಮಂಚ'. ಈ ಕಥಾಸಂಕಲನದಲ್ಲಿ ಏಳು ಸಣ್ಣಕಥೆಗಳಿವೆ:
ಈ ಪುಸ್ತಕದಲ್ಲಿ ಖ್ಯಾತ ಪತ್ರಕರ್ತರೂ ,ಲೇಖಕರೂ ಆಗಿರುವ ಶ್ರೀ ಈಶ್ವರಯ್ಯ ನವರು ತಮ್ಮ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ: "ಸಣ್ಣ ಕತೆಯ ಲಕ್ಷಣಗಳನ್ನು ಅಲಕ್ಷಿಸಿ ಅದರ ಕುರಿತಾದ ರೂಢ ನಿಯಮಗಳನ್ನು ಬದಿಗೆ ಸರಿಸಿ ಒಳ್ಳೆಯ ಕತೆಗಳನ್ನು ಬರೆಯಲು ಸಾಧ್ಯವೇ ಎನ್ನುವ ಪ್ರಶ್ನೆಗೆ 'ಸಾಧ್ಯ' ಎನ್ನುವ ಉತ್ತರ ನಿಂಜೂರರ ಕತೆಗಳಲ್ಲಿ ಸಿಗುತ್ತದೆ"
ಬೆನ್ನುಡಿಯಲ್ಲಿ ಜಯಂತ ಕಾಯ್ಕಿಣಿಯವರು ಬರೆದ ಈ ಮಾತುಗಳೂ ಲೇಖಕ ನಿಂಜೂರರ ಪರಿಚಯ ನೀಡುತ್ತವೆ: "ನಾಲ್ಕು ದಶಕಗಳ ಹಿಂದೆಯೇ 'ಕಡಲು ಕರೆಯಿತು' ಎಂಬ ಅಪ್ಪಟ ಕಥೆ ಮತ್ತು 'ಉಸಿರು' ಎಂಬ ಅದ್ಭುತ ಕಾದಂಬರಿಯ ಮೂಲಕ ಕನ್ನಡದ ಮಹತ್ವದ ಕತೆಗಾರರ ಪಂಕ್ತಿಯಲ್ಲಿ ಸೇರಿಕೊಂಡ ವ್ಯಾಸರಾವ್ ನಿಂಜೂರ್, ಆಗತಾನೇ ಆರಂಭವಾಗಿದ್ದ ನವ್ಯದ ನೆಗಸಿನ ನಟ್ಟನಡುವೆ ಇದ್ದೂ ಭಿನ್ನವಾದವರು."
ಸಾಹಿತಿ, ವಿಜ್ಞಾನಿ ವ್ಯಾಸರಾವ್ ನಿಂಜೂರ್‌ರವರು ಹುಟ್ಟಿದ್ದು ಉಡುಪಿ ಜಿಲ್ಲೆಯ ತೆಂಕ ನಿಡಿಯೂರಿನಲ್ಲಿ. ತಂದೆ ಶ್ರೀನಿವಾಸ ನಿಂಜೂರ್, ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಗರಡಿ ಮಜಲು, ಕೊಡವೂರು, ಮಿಲಾಗ್ರಿಸ್ ಹೈಸ್ಕೂಲು ಮುಂತಾದೆಡೆ ಪಡೆದ ಅವರು, ಉಡುಪಿಯ ಎಂ.ಜಿ.ಎಂ. ಕಾಲೇಜಿನಿಂದ ಬಿ.ಎಸ್ಸಿ. ಪದವಿಯನ್ನೂ ಪಡೆದರು. ನಂತರ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ, ಹಾಗೂ ಮುಂಬಯಿ ವಿಶ್ವವಿದ್ಯಾಲಯ ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಗಳನ್ನು ಪಡೆದರು. ಮಣಿಪಾಲದ ಕಸ್ತೂರ್ ಬಾ ಮೆಡಿಕಲ್ ಕಾಲೇಜಿನಲ್ಲಿ ಬಯೋ ಕೆಮಿಸ್ಟ್ರಿ ವಿಭಾಗದಲ್ಲಿ ಉಪನ್ಯಾಸಕರಾಗಿ ಕೆಲಸ ಆರಂಭಿಸಿದ ಅವರು, ನಂತರ ಮುಂಬಯಿಯ ಭಾಭಾ ಪರಮಾಣು ಸಂಶೋಧನ ಕೇಂದ್ರದ ಬಯೋ ಕೆಮಿಸ್ಟ್ರಿ ...
READ MORE