‘ಮಾಯಾವಿ ಮಾಂಗಿ’ ಕೃತಿಯು ಚಿಂತಾಮಣಿ ಕೂಡ್ಲೆಕೆರ ಅವರ ಕತಾಸಂಕಲನ. ಕೃತಿಗೆ ಬೆನ್ನುಡಿ ಬರೆದಿರುವ ಜಯಂತ ಕಾಯ್ಕಿಣಿ ಅವರು, ನಿನ್ನೊಳಗಿನ ಕವಿಯೇ ಈ ಕಥನದ ಚುಕ್ಕಾಣಿ ಹಿಡಿದಾಗೆಲ್ಲ ‘ರೂಪವಿಲ್ಲದವನ ಜತೆ ಮಾತನಾಡು, ಹೆಸರಿಲ್ಲದಾತನನ್ನು ಹೆಸರು ಹಿಡಿದು ಕರೆಯುವ’ ಹವಣಿಕೆ ನಮ್ಮದೂ ಆಗುತ್ತದೆ. ಮನುಷ್ಯ ರೂಪದಲ್ಲೇ ದೇವರನ್ನು ಕಾಣುವ ಸೋಜಿಗವೂ ಸದ್ದಿಲ್ಲದೇ ನಡೆಯುತ್ತದೆ. ದೇವರಿಲ್ಲದ ದೇಗುಲದಲ್ಲಿ ಮುರುಕು ಖುರ್ಚಿ ಹಾಕಿಕೊಂಡು, ಕಲ್ಲು ತುಂಬಿದ ಬುಟ್ಟಿ ಹಿಡಿದುಕೊಂಡು ಕೂತ ಮಾಯಾವಿ ಮಾಂಗಿ, ‘ನಾವೆಲ್ಲರೂ ಮಹಾಭಾರತದಲ್ಲಿ ಗೋಪಿಕಾ ಸ್ರೀಯರಾಗಿದ್ದೇವು. ರಾಮಾಯಣದಲ್ಲಿ ಕವಿಗಳಾಗಿದ್ದೆವು’ ಎನ್ನುವ ಸಾವಿತ್ರಕ್ಕ, ‘ಗೊತ್ತಿರದ ಹಾಡೊಂದನ್ನು ಮತ್ತೆ ನೀವು ಕೇಳ ಬಯಸುತ್ತೀರಿ’ ಎನ್ನುವ ಉಪಾಂಬಿಕಾ, ಶುದ್ದ ನೀರಿನ ಒರತೆಯಲ್ಲಿ ತೇಲಿಬರುವ ಪಾಲಿಥಿನ್ ಕವರ್ ಗಳು, ರೆಕ್ಕೆ ಬಂದಂತೆ ಹಾರುವ ಗುಬ್ಬಿಗಳು, ಅಶರೀರವಾಣಿಯ ಆಲಿಕೆಗೊಂದು ಮುಕ್ತ ಪ್ರಾಂಗಣಗಳನ್ನು ಸೃಷ್ಟಿಸುತ್ತವೆ. ತಂದದ್ದೇನು, ಪಡೆದದ್ದೇನು, ಕಳೆದುಕೊಂಡದ್ದೇನು-ಎಂಬ ಮುಂದಿನ ಪ್ರಶ್ನೆಗಳನ್ನು ಎತ್ತುತ್ತಲೇ; ಕೊನೆಗೂ ನಾವು ಕಳೆದುಕೊಳ್ಳಲಾರದ್ದು ಪಡೆದ ಅನುಭವ ಮಾತ್ರ-ಎಂಬುದನ್ನು ಪರೋಕ್ಷವಾಗಿ ಧ್ವನಿಸುವ ‘ಮಾಯಾವಿ ಮಾಂಗಿ’, ‘ಯಾದೇವಿ’, ‘ಆ ಕತ್ತಲೆಯಿಂದ’, ‘ವೈತರಣಿಯ ಸೆಳವು’, ‘ಉಳಿದ ಶಬ್ದ’ ಮುಂತಾದ ಯಶಸ್ವಿ ಕಥೆಗಳ ಸಂಕಲನವಿದು’ ಎಂಬುದಾಗಿದೆ ಎಂದು ಪ್ರಶಂಸಿಸಿದ್ದಾರೆ.
ಚಿಂತಾಮಣಿ ಕೊಡ್ಲೆಕೆರೆ ಅವರು 1961 ಜನವರಿ 13ರಂದು ಗೋಕರ್ಣ ಬಳಿಯ ಅಘನಾಶಿನಿ ಗ್ರಾಮದಲ್ಲಿ ಜನಿಸಿದರು. ತಂದೆ ಎಂ.ಎ. ಭಟ್ಟ. ತಾಯಿ ರಾಧೆ. ಹಿರೇಗುತ್ತಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಧಾರವಾಡದಲ್ಲಿ ಬಿಎಸ್ಸಿ ಪದವಿ ಪಡೆದರು. ತ್ರಿವೆಂಡ್ರಮ್ನಲ್ಲಿ ಟೆಲಿ ಕಮ್ಯುನಿಕೇಶನ್ಸ್ನಲ್ಲಿ ಒಂದು ವರ್ಷದ ಇಂಜಿನಿಯರಿಂಗ್ ತರಬೇತಿ ಹಾಗೂ ಬೆಂಗಳೂರಿನಲ್ಲಿ ಎಂ.ಬಿ.ಎ ಪದವಿ ಪಡೆದರು. ಬಾಲ್ಯದಿಂದಲೂ ಸಾಹಿತ್ಯಾಸಕ್ತಿ ಇದ್ದ ಕೊಡ್ಲೆಕೆರೆ ಅವರು ಮಾಸ ಪತ್ರಿಕೆಗಳಿಗೆ ಹನಿಗವನಗಳನ್ನು ಬರೆಯಲು ಆರಂಭಿಸಿದರು. ಕನ್ನಡಪ್ರಭ, ವಿಜಯಕರ್ನಾಟಕ ಸೇರಿದಂತೆ ಹಲವಾರು ಪತ್ರಿಕೆಗಳಲ್ಲಿ ಇವರು ಬರೆದ ಅಂಕಣ, ಕತೆ, ಕವನಗಳಿಗೆ ಬಹುಮಾನವನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ...
READ MORE