ರಂಗಕರ್ಮಿ, ಲೇಖಕರೂ ಆದ ಮೌನೇಶ ಬಡಿಗೇರ ಅವರ ಕೃತಿ ’ ಮಾಯ ಕೋಲಾಹಲ’.
ತಾಯಿ-ಮಗನ ಸಂಬಂಧ, ಗಂಡ-ಹೆಂಡತಿಯರ ಸಂಬಂಧಗಳ ಮೂಲಕ ಕೌಟುಂಬಿಕತೆಯನ್ನು ಈ ಕೃತಿಯಲ್ಲಿ ಬಿಂಬಿಸಿದ್ದಾರೆ. ಚಿಟ್ಟೆ ಮತ್ತು ಸೆಲ್ವಿ ಮತ್ತಿತರ ಕತೆ, ಒಟ್ಟು ಎಂಟು ಕತೆಗಳ ಗುಚ್ಛ ’ಮಾಯಾ ಕೋಲಾಹಲ’ದಲ್ಲಿದೆ. ಇಲ್ಲಿರುವ ಎಂಟು ಕತೆಗಳ ಸಾಮಾನ್ಯವಾದ ಒಂದು ಅಂಶವೆಂದರೆ ಟಿವಿ ಮತ್ತು ಕ್ರೈಂ ಟೈಮ್ ಎಂಬ ಒಂದು ಕಾರ್ಯಕ್ರಮ. ಲೇಖಕ ಮೌನೇಶ್ ಅವರು ಇದುವರೆಗಿನ ತಮ್ಮ ಪ್ರೌಢ ಬದುಕಿನ ಅನುಭವಗಳು, ಮತ್ತು ತಮಗೆ ದಕ್ಕಿಸಿದ ಗ್ರಹಿಕೆಗಳನ್ನು ಅವು ತಮಗೆ ತಟ್ಟಿದಷ್ಟೇ ತೀವ್ರವಾಗಿ - ಅದಕ್ಕಾಗಿ ಕನಸು, ರೂಪಕ, ವ್ಯಂಗ್ಯ, ವಿನೋದ ಇತ್ಯಾದಿಗಳನ್ನು ಬಳಸಿಕೊಂಡು ಇಲ್ಲಿರುವ ಕತೆಗಳನ್ನು ಕಟ್ಟಿದ್ದಾರೆ.
ಮೌನೇಶ ಬಡಿಗೇರ ಅವರ ’ಮಾಯಾ ಕೋಲಾಹಲ’ ಕೃತಿಗೆ ಛಂದ ಪುಸ್ತಕ ಬಹುಮಾನ ಲಭಿಸಿದೆ.
ರಂಗನಿರ್ದೇಶಕ, ನಟ ಮೌನೇಶ್ ಬಡಿಗೇರ ಕತೆಗಾರ ಕೂಡ. ’ಮಾಯಾ ಕೋಲಾಹಲ’ ಪ್ರಕಟಿತ ಕತೆಗಳ ಸಂಕಲನ. ಸೂಜಿದಾರ’ ಎಂಬ ಚಿತ್ರ ನಿರ್ದೇಶಿಸಿದ್ದಾರೆ. ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಮೌನೇಶ ಅಭಿನಯ ಕಲಿಕೆಯ ಕಾರ್ಯಾಗಾರ ನಡೆಸುತ್ತಿದ್ದಾರೆ. ʻಮಾಯಾಕೋಲಾಹಲʼ ಸಂಕಲನಕ್ಕೆ 2015ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಟೊಟೊ ಪುರಸ್ಕಾರ', 'ಡಾ. ಯು ಆರ್ ಅನಂತಮೂರ್ತಿ ಪುರಸ್ಕಾರ', `ಬಸವರಾಜ ಕಟ್ಟಿಮನಿ ಪುರಸ್ಕಾರ ಪಡೆದಿದ್ದಾರೆ. “ವಿಶಾಂಕೇ ಅರ್ಥಾತ್ ವಿಧ್ವಂಸಕ ಶಾಂತಿ ಕೇಂದ್ರ' ('ರಂಗಭೂಮಿ' ಉಡುಪಿ ನಡೆಸಿದ 'ಡಾ. ಹೆಚ್. ಶಾಂತಾರಾಮ್ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆ'ಯಲ್ಲಿ ಪ್ರಥಮ ಬಹುಮಾನ ಪಡೆದ ಕೃತಿ) ಹಾಗೂ 'ಟಪಾಲುಮನಿ'(ರವೀಂದ್ರನಾಥ ಠಾಕೂರರ ಡಾಕ್ಘರ್ ...
READ MOREಕೇಂದ್ರ ಸಾಹಿತ್ಯ ಅಕಾಡೆಮಿ, ಯುವ ಪುರಸ್ಕಾರ (2015)