’ಲಾಸ್ಟ್ ಲೋಕಲ್ ಲೋಸ್ಟ್ ಲವ್ ’ ಮುಂಬಯಿಯ ಕತೆಗಾರ ರಾಜೀವ ನಾರಾಯಣ ನಾಯಕ ಕತೆಗಾರಿಕೆಯಲ್ಲಿ ತಮ್ಮದೇ ಆದ ದಾರಿಯೊಂದನ್ನು ಸ್ಥಾಪಿಸುತ್ತಾ ಸಾಗುತ್ತಾರೆ. ರಾಜೀವ ನಾಯಕರ ಕತೆಯನ್ನು ಓದುವಾದ ಮೊದಲಿಗೆ ಗಮನಸೆಳೆಯುವ ಅಂಶಗಳೆಂದರೆ ಅವರ ಪ್ರಾದೇಶಿಕ ಸೊಗಡಿನ ಕುಸುರಿಯುಳ್ಳ ಸಶಕ್ತವಾದ ಭಾಷೆ ಮತ್ತು ಸಮಕಾಲೀನ ಸನ್ನಿವೇಶಗಳನ್ನು ಹೊಂದಿರುವ ಕಥಾವಸ್ತುಗಳು. ರಾಜೀವ ನಾಯಕರು ಈ ಕಾಲದ ಕತೆಗಾರರು. ಮುಂಬಯಿ, ಉತ್ತರ ಕನ್ನಡ ಉಭಯವಾಸಿಗಳ ಆಶೋತ್ತರಗಳನ್ನು, ಸಂಕಟಗಳನ್ನು, ತಲ್ಲಣಗಳನ್ನು ತಮ್ಮ ಕತೆಗಳಲ್ಲಿ ದಾಖಲಿಸುತ್ತಿರುವ ಅಪರೂಪದ ಪ್ರಾದೇಶಿಕ ಕಥನಕಾರ ಕೂಡಾ ಹೌದು. ಈ ಮಾತಿಗೆ ಉದಾಹರಣೆಯಾಗುವಂತೆ ಈ ಸಂಕಲನದಲ್ಲಿ ಹನ್ನೆರಡು ಕಥೆಗಳಿವೆ.
ಲೇಖಕ ರಾಜೀವ ನಾರಾಯಣ ನಾಯಕ ಅವರು ಮುಂಬೈ ಕನ್ನಡಿಗ. ಬರವಣಿಗೆಯ ಮೇಲೆ ಹಿಂದಿನಿಂದಲೂ ಆಸಕ್ತಿ ಬೆಳೆಸಿಕೊಂಡು ಬಂದಿದ್ದು, ಇವರು ರಚಿಸಿದ ಕತೆಗಳು ಹಲವಾರು ಕಥಾಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಅವೆಲ್ಲವನ್ನೂ ಸೇರಿಸಿ ʻಗುರ್ಬಾಣಕ್ಕಿʼ ಮತ್ತು ʻಲಾಸ್ಟ್ ಲೋಕಲ್ ಲೋಸ್ಟ್ ಲವ್ʼ ಎಂಬ ಎರಡು ಕಥಾಸಂಕಲನಗಳನ್ನು ಹೊರತಂದಿದ್ದಾರೆ. ಸಾಹಿತ್ಯದ ಜೊತೆ ರಂಗಭೂಮಿ ಇವರ ಮತ್ತೊಂದು ಆಸಕ್ತಿದಾಯಕ ಕ್ಷೇತ್ರವಾಗಿದೆ. ...
READ MORE