‘ಖಾಲಿ ಹಾಳೆ’ ಕೃತಿಯು ಗೀತಾ ಜಿ. ಹೆಗಡೆ ಕಲ್ಮನೆ ಅವರ ಕಥಾಸಂಕಲನವಾಗಿದೆ. ಇಲ್ಲಿನ ‘ವಿದಿಯಾಟ’, ‘ವಿಧಿ ಲಿಖಿತ’, ದುರಂತ, ಹೆಸರೇ ಹೇಳುವಂತೆ ಬದುಕಿನ ಗೋಳಾಟದ ಚಿತ್ರಣ, ದುಃಖಾಂತ್ಯದ ಕಥೆಗಳು , ವಿದಿಯ ಮುಂದೆ ನಮ್ಮದೇನು ಆಟ ಅಲ್ಲವೇ? ಇದರಿಂದ ತಪ್ಪಿಸಿಕೊಳ್ಳುವಂತಿಲ್ಲ. ವಿಧಿ ಲಿಖಿತ ಕಥೆಯಲ್ಲಿ ಅಕ್ಕ, ತಂಗಿಯರ ಬಾಂಧವ್ಯ ಬಹಳ ಚೆನ್ನಾಗಿ ಚಿತ್ರತವಾಗಿದೆ. ‘ಯಂಕನ ಜಾತ್ರೆ’ ಸಹ ದುಃಖಾಂತ್ಯವಾದರೂ ಬಾಲಕ ಯಂಕನ ಆಸೆ, ನಿರಾಸೆ ಎರಡೂ ಓದುಗನ ಮನಸ್ಸಿನಲ್ಲಿ ಉಳಿಯುತ್ತದೆ. ಮತ್ತೊಂದು ನವಿರು ಭಾವನೆಯ ಚೆಂದದ ಕತೆ ‘ನೆನಪು’, ಓದು ಮುಗಿದ ಮೇಲೆ ಕಥೆಯ ಟೈಟಲ್ ಸರಿ ಇಲ್ಲ ಎನಿಸಿದರೂ ಬಹಳ ಸುಂದರ ವಾತಾವರಣವನ್ನು ಸೃಷ್ಟಿಸುತ್ತಾ ಹೃದಯಕ್ಕೆ ಹತ್ತಿರವಾಗುವ ಕಥೆ. ಕಥೆ ‘ಹೆತ್ತೊಡಲು’ ತಾಯಿ, ಮಕ್ಕಳ ಮಧುರ, ಆತ್ಮೀಯ ವಾತಾವರಣವನ್ನು ನಮ್ಮ ಮುಂದೆ ಸೃಷ್ಟಿಸುತ್ತದೆ, ತಮ್ಮ ಮಾತೃ ಹೃದಯದ ಪ್ರೀತಿಯನ್ನು ಮೊಗೆ, ಮೊಗೆದು ಉಣಿಸಿದ್ದಾರೆ, ಆದರೆ ಕಥೆಯ ಅಂತ್ಯ ಸ್ವಲ್ಪ ಗಂಭೀರವಾಗಬಹುದಿತ್ತು ಎನಿಸದಿರದು, ಆದರೂ ಕಥೆಯ ಸಿಹಿ ಬಹುಕಾಲ ಮನದಲ್ಲಿ ಉಳಿಯುತ್ತದೆ. ಹಾಗೆಯೇ ‘ಬಂಧ’ ಕಥೆ ಕುಟುಂಬದ ಪ್ರಾಮುಖ್ಯತೆ, ಹಳ್ಳಿಯ ಜೀವನ, ಬೇಸಾಯದ ಬದುಕೇ ಚೆನ್ನ ಎನ್ನುವ ಮೌಲ್ಯವನ್ನು ಎತ್ತಿ ಹಿಡಿಯುತ್ತದೆ, ಹಳ್ಳಿಯ ವಾತಾವರಣ ಎಂತವರನ್ನೂ ಹತ್ತಿರ ತರುತ್ತದೆ. ಈ ಎಲ್ಲಾ ಕಥೆಗಳಲ್ಲಿ ನಾವು ಅನಾಯಾಸವಾಗಿ ಕಥೆಯ ಭಾಗವಾಗುತ್ತೇವೆ, ನಾವೇ ಕಥೆಯ ಒಂದು ಪಾತ್ರವಾಗಬಹುದು ಇಲ್ಲಾ ನಮ್ಮ ಸುತ್ತ, ಮುತ್ತ ಕಥೆ ನಡೆಯುತ್ತಿರುವಂತೆ ಭಾಸವಾಗುತ್ತದೆ, ಇದೇ ಲೇಖಕಿಯ ಗಟ್ಟಿತನ. ಕಥೆಗಳಲ್ಲಿ ಕವಿ ಹೃದಯ ಪುಟಿದೆದ್ದು ಪ್ರಕೃತಿ ಸೌಂದರ್ಯಯವನ್ನು ಓದುಗನಿಗೆ ಉಣ ಬಡಿಸುತ್ತಾರೆ, ಭಾವನೆಗಳ ಜಾಲದಲ್ಲಿ ನಮ್ಮನ್ನು ಬೀಳಿಸುತ್ತಾರೆ, ಇದೇ ಕಥೆಗಳ ಪ್ಲಸ್ ಪಾಯಿಂಟ್, ಕೆಲವೊಮ್ಮೆ ಅವೇ ಕಥೆಯಿಂದ ನಮ್ಮನ್ನು ದೂರ ಸರಿಸಿ ಬಿಡುತ್ತದೆ.
ಗೀತಾ ಜಿ ಹೆಗಡೆ ಕಲ್ಮನೆ ಮೂಲತಃ ಬೆಂಗಳೂರಿನವರು. ಬರವಣಿಗೆ ಅವರ ಆಸಕ್ತಿ ಕ್ಷೇತ್ರ. ಕೃತಿಗಳು: ಮನಸೆ ನಿನೇಕೆ ಹೀಗೆ (ಲೇಖನಗಳ ಸಂಗ್ರಹ) ...
READ MORE