ಕಾವೇರಿ ತೀರದ ಕಥೆಗಳು

Author : ಮೇಜರ್. ಡಾ. ಕುಶ್ವಂತ್ ಕೋಳಿಬೈಲು

Pages 106

₹ 150.00




Year of Publication: 2022
Published by: ಮೈತ್ರಿ ಪ್ರಕಾಶನ
Address: 504, 2ನೇ ಅಡ್ಡರಸ್ತೆ, 2ನೇ ಬ್ಲಾಕ್, ಬನಶಂಕರಿ, ಬೆಂಗಳೂರು-50
Phone: 8317396164

Synopsys

ಲೇಖಕ ಕುಶ್ಚಂತ್ ಕೋಳಿಬೈಲು ಅವರ ಕತಾಸಂಕಲನ ಕಾವೇರಿ ತೀರದ ಕಥೆಗಳು. ಈ ಕೃತಿಯಲ್ಲಿ ಲೇಖಕ ಹರೀಶ್ಕೇರ ಅವರು ಮುನ್ನುಡಿಯನ್ನು ಬರೆದಿದ್ದಾರೆ. ಅವರು ಹೇಳುವಂತೆ, ಕುಶ್ಚಂತ್ ತಮ್ಮ ಕತೆಗಳಲ್ಲಿ ಜೀವ ತುಂಬಿ ತುಳುಕುವ ಚೈತನ್ಯದಾಯೀ ಹೆಣ್ಣು ಪಾತ್ರಗಳನ್ನೂ, ವೇಸ್ಟಫೆಲೋ ಅನಿಸುವ (ಆದರೆ ಅವುಗಳನ್ನು ಓದುವಾಗ ಫುಲ್ ಮಜಾ ಕೊಡುವ) ಗಂಡಸರನ್ನೂ ಸೃಷ್ಟಿಸಿದ್ದಾರೆ. ಕುಶ್ಚಂತ್ ತಮ್ಮ ಕತೆಗಳಲ್ಲಿ ಅಪೂರ್ವ ಮಾನವ ಸಂಬಂಧಗಳ ಜಾಲವೊಂದನ್ನು ನಿರ್ಮಿಸಿದ್ದಾರೆ. ಕಡೆಗೂ ಕತೆಗಳೆಂದರೆ ಸಂಬಂಧಗಳ ಪರೀಕ್ಷೆಯೆ ತಾನೇ.. ಎಂಬುದಾಗಿ ಬರೆದಿದ್ದಾರೆ.

About the Author

ಮೇಜರ್. ಡಾ. ಕುಶ್ವಂತ್ ಕೋಳಿಬೈಲು

ವೃತ್ತಿಯಿಂದ ವೈದ್ಯರಾದ ಮೇ ಡಾ. ಕುಶ್ವಂತ ಕೋಳಿಬೈಲು ಅವರು ಹುಟ್ಟಿದ್ದು ಕೊಡಗಿನ ಭಾಗಮಂಡಲದಲ್ಲಿ. ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನಿಂದ ವೈದ್ಯಕೀಯ ಪದವಿ.ನಂತರ ಸೈನ್ಯ ಸೇರಿ ಆರ್ಮಿಮೆಡಿಕಲ್ ಕೋರ್ ವಿಭಾಗದಲ್ಲಿ ಭರ್ತಿ.ನಿವೃತ್ತಿಯ ನಂತರ ಪುಣೆಯಲ್ಲಿ ಪಿಡಿಯಾಟ್ರಿಶಿಯನ್ ಆಗಿ ಕೆಲಸ. ಈಗ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದು,  ಸಾಹಿತ್ಯ ಮೆಚ್ಚಿನ ಹವ್ಯಾಸ. ಪತ್ರಿಕೆಗಳಿಗೆ ನಿಯಮಿತವಾಗಿ ಅಂಕಣ ಬರೆಯುತ್ತಿದ್ದಾರೆ. ಕೃತಿಗಳು: .ಕೂರ್ಗ್ ರೆಜಿಮೆಂಟ್ (ಪ್ರಬಂಧಗಳ ಸಂಕಲನ), ಮುತ್ತಿನ ಹಾರ (ಕವನಗಳ ಸಂಕಲನ), ಕಾವೇರಿ ತೀರದ ಕಥೆಗಳು (ಕಥಾ ಸಂಕಲನ)  ...

READ MORE

Related Books