ಲೇಖಕಿ ರೇಶ್ಮಾ ಭಟ್ ಅವರ ಕಥಾ ಸಂಕಲನ-ಕಥಾ ವ್ಯವಕಲನ. ಮೌನದೊಳಗಿನ ಹೆಸರು, ಚಿತ್ರದ ಹಿಂದೆ ಮರೆಯಾದ ಭಿತ್ತಿ, ಅವ್ವ ಕೊಟ್ಟೂವು, ಬದುಕು ಆರಿಸುವ ಚಿತ್ರಗಳು, ಚುಕ್ಕೆಗಳಿಂದ ಚಿತ್ರದವರೆಗೆ, ಬೇರು ಮಣ್ಣುಗಳ ಜೀವಯಾನ, ಹೃದಯಸ್ಪರ್ಶಿ, ಮೌನ ಹುಟ್ಟುವ ಮುನ್ನ, ಕಣ್ಣು ಹೀರಿದ ಬಣ್ಣ, ನೆಲ ಸೋಕದ ಬಿಳಲು, ಅಸುವು ಮುಕ್ತ, ತೀರ ಮೀರಿದ ದಾರಿ ಹೀಗೆ 15 ಕಥೆಗಳು ಸಂಕಲನಗೊಂಡಿವೆ.
ಸಾಹಿತಿ ಶಶಿರಾಜ ಆಚಾರ್ಯ ಅವರು ಕೃತಿಗೆ ಮುನ್ನುಡಿ ಬರೆದು ‘ಇಲ್ಲಿಯ ಕಥೆಗಳಲ್ಲಿ ಮುಗ್ದತೆ, ಬೌದ್ಧಿಕ ಪ್ರಾಮಾಣಿಕತೆ, ಕಥನ ಕ್ರಮ, ಪಾತ್ರಚಿತ್ರಣದ ವಿನ್ಯಾಸವಿದೆ. ಜೀವನಾನುಭವದ ಪದ ವಿಸ್ತಾರಗಳು ತೀರಾ ಸರಳವಾಗಿವೆ. ಕಥೆಗಳಲ್ಲಿ ಬರಹಗಾರರ ಸಂವೇದನಾಶೀಲ ಗುಣ ಕೆಲಸ ಮಾಡಿದೆ. ಕೇವಲ ಪದಾಡಂಬರವಿಲ್ಲ. ಓದುಗ ತಾನೇ ತಾನಾಗಿ ಕಥಾ ಪಾತ್ರದಲ್ಲಿ, ಭಾವವಿಸ್ತಾರದಲ್ಲಿ ಕಳೆದು ಹೋಗುವ ತಂತ್ರಗಾರಿಕೆ ಇಲ್ಲಿದೆ. ಹೀಗಾಗಿ, ಪ್ರತಿ ಕಥೆಯೊಂದಿಗಿನ ಕಥೆಯ ಜಿಗಿತವು ಓದುಗರಿಗೆ ಬೇಸರ ಹುಟ್ಟಿಸುವುದಿಲ್ಲ' ಎಂದು ಪ್ರಶಂಸಿಸಿದ್ದಾರೆ.
ಕವಿ, ಅಂಕಣಕಾರ್ತಿ, ಲೇಖಕಿ ರೇಶ್ಮಾ ಭಟ್ ಅವರು ಮೂಲಕ ಉತ್ತರ ಕನ್ನಡ ಜಿಲ್ಲೆಯವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಮದಪದವ್ ನಲ್ಲಿ ಕನ್ನಡ ಅಧ್ಯಾಪಕಿ. ರೇಶ್ಮಾ ಅವರು ಗಮಕ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಅಂಕಣಕಾರರಾಗಿರುವ ಇವರು ಸದ್ಯ ‘ಚಿಂತನ ಬಯಲು’ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದಾರೆ. ನವೆ ನವೋನ್ಮೇಷಶಾಲಿನಿ ಹಾಗೂ ಕಥಾ ವ್ಯವಕಲನ ಇವರ ಕಥಾ ಸಂಕಲನಗಳು. ...
READ MORE