ಹಿರಿಯ ಸಾಹಿತಿ ಎಂ.ವೀ. ಸೀತಾರಾಮಯ್ಯ ಅವರು ಬರೆದ ಕಾದಂಬರಿ-ಕರುಣಾ ಲಹರಿ. ಇದು ಲೇಖಕರ 4ನೇ ಸಣ್ಣ ಕಥೆಗಳ ಸಂಕಲನವಾಗಿದೆ. ಇಲ್ಲಿಯ ಎಲ್ಲ ಕಥೆಗಳು ಪ್ರಭಾತ, ಜೀವನ, ಉಷಾ, ಪ್ರಜಾಮತ, ಪ್ರಬುದ್ಧ ಕರ್ಣಾಟಕ ಹೀಗೆ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕರುಣೆ, ಪ್ರಣಯಗೀತ, ಹಾದಿಯ ಚೆಲುವೆ, ಊಹೆ ನಿಜವಾದರೆ, ಸಿಗರೇಟಿನ ತುಂಡು, ಅದೃಷ್ಟದ ಕರವಸ್ತ್ರ ಹೀಗೆ ಒಟ್ಟು 11 ಕಥೆಗಳಿವೆ.
ರಾಘವ ಕಾವ್ಯನಾಮದ ಮೂಲಕ ಪರಿಚಿತರಾಗಿರುವ ಎಂ.ವಿ. ಸೀತಾರಾಮಯ್ಯ ಜನಿಸಿದ್ದು ಮೈಸೂರಿನಲ್ಲಿ. ಮಕ್ಕಳಿಗಾಗಿ ಬರೆದ 'ಹೂವನು ಮಾರುತ ಹೂವಾಡಗಿತ್ತಿ' ಹಾಡು ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿತ್ತು. ಕನ್ನಡ ಅಧ್ಯಾಪಕರಾಗಿದ್ದ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ಮನೆಮಾತಾಗಿದ್ದರು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗಳೆಂದರೆ ಹಕ್ಕಿಹಾಡು, ರಾಗ, ಅಶೋಕ ಚಕ್ರ (ಕವನ ಸಂಗ್ರಹಗಳು), ರಾಘವ, ಕವನ ಕೋಶ, ಆ ಚಿತ್ರಗಳು, ಹಕ್ಕಿ ಹಾಡು, ರತಿದೇವಿ ಮತ್ತು ಇತರ ಕಥೆಗಳು, ಬಿಸಿಲು ಬೆಳದಿಂಗಳು, ನಿಲ್ದಾಣಗಳ ನಡುವೆ (ಕಥಾ ಸಂಕಲನಗಳು), ಭಾಗ್ಯಲಕ್ಷ್ಮಿ, ನಂಜಿನ ಸವಿ, ಜೀವನದ ಜೊತೆಗಾರ (ಕಾದಂಬರಿಗಳು), ತೆರೆಮರೆಯ ಚಿತ್ರಗಳು, ತೊಟ್ಟಿಲು ತೂಗದ ಕೈ (ನಾಟಕಗಳು), ...
READ MORE