ಗ್ರಾಮೀಣ ಹಿನ್ನೆಲೆಯಿಂದ ಬಂದ ಪ್ರೊ. ಸುಧಾಕರ ಅವರು ಗ್ರಾಮ್ಯ ಬದುಕುಗಳ ಮುಗ್ಧತೆ ಮತ್ತು ಅಮಾಯಕತೆಯನ್ನು ಸನಿಹದಿಂದ ಬಲ್ಲವರು. ಪ್ರೊ. ಸುಧಾಕರ ಅವರ ಕಥೆಗಳಲ್ಲಿ ಗ್ರಾಮೀಣ ಬದುಕಿನ ಸೊಗಡನ್ನು ನೋಡಬಹುದು. ಈ ಕಥಾ ಸಂಕಲನದಲ್ಲಿ ಒಟ್ಟು 20 ಕಥೆಗಳಿವೆ. ಬಿಡಿ ಬಿಡಿಯಾಗಿ ಪ್ರಕಟಗೊಂಡಿರುವ ಸಾಹಿತ್ಯ ಆಸಕ್ತರ ಪ್ರೀತಿಗೆ ಪಾತ್ರವಾಗಿವೆ. ಸುಧಾಕರ ಅವರ ಎಲ್ಲಾ ಕಥೆಗಳನ್ನು ಈ ಕೃತಿಯಲ್ಲಿ ಒಟ್ಟುಗೂಡಿಸಿದ್ದಾರೆ. ಹಳ್ಳಿಗಾಡು ಬದುಕಿನ ಅನನ್ಯ ಓದಿನ ಅನುಭವವು ಇಲ್ಲಿ ಕಾಣಸಿಗುತ್ತದೆ.
ಕಣ್ಣಿ ಕಿತ್ತ ಹಸು, ಸಾಕಿದ ನಾಯಿ, ನಾನು ಪ್ರೇಮಿಸಿದ ಹುಡುಗಿ, ಹೊರಲಾರದ ಹೊರೆ, ನಕ್ಷತ್ರ ನಕ್ಕವು, ನಮ್ಮ ಜನ, ಕೋಡಿ ಬಿತ್ತು ಕೋಡಿ, ಮೆರವಣಿಗೆ, ಗರಿಕೆ ಬೇರು, ಬಾಡುಬುಕ್ಕನ ಮುಳ್ಳು, ಸಂಬಂಧ, ಉಸುಕು, ಕಣ್ಣು, ಜಲದ ಕಣ್ಣು, ಸಂತೆಹಾದಿ, ಈಶ್ವರನ ಗುಡಿಯ ಒಳಗೆ ಮತ್ತು ಹೊರಗೆ, ಸೆಳೆತ, ಪುಟನೆಗೆದ ಮಠದೊಳಗಣ ಬೆಕ್ಕು, ವಿಕಾಸ ಕತೆಗಳನ್ನು ಕಾಣಬಹುದು.
ಕಥೆಗಾರ ಪ್ರೊ. ಸುಧಾಕರ ಅವರು ಬೆಂಗಳೂರು ಜಿಲ್ಲೆ ಮಾಗಡಿ ತಾಲ್ಲೂಕಿನ ಎಣ್ಣೆಗೆರೆ ಗ್ರಾಮದವರು. ಗ್ರಾಮೀಣ ಬದುಕಿನ ಸಂಗತಿಗಳ ಆಧರಿಸಿ ಕತೆ ಕಟ್ಟುವ ಸುಧಾಕರ ಅವರು ಸೃಜನಶೀಲ ಬರವಣಿಗೆಯ ಜೊತೆಗೆ ಜಾನಪದ ಮತ್ತು ಶಿಷ್ಟ ಸಾಹಿತ್ಯ ಅಧ್ಯಯನಗಳಲ್ಲಿ ಆಸಕ್ತರಾಗಿದ್ದರು. ಕಣ್ಣಿ ಕಿತ್ತ ಹಸು, ಗರಿಕೆಬೇರು, ಬಾಡುಬಕ್ಕನ ಮುಳ್ಳು (ಕಥಾ ಸಂಕಲನಗಳು), ಕುವೆಂಪು ಸಾಹಿತ್ಯ ಸಮೀಕ್ಷೆ, ಕನಕದಾಸರ ರಾಗಿರಾಮಾಯಣದರ್ಶನ (ವಿಮರ್ಶಾ ಲೇಖನಗಳು), ಜನಪದ ಬೆಡಗಿನ ವಚನಗಳು, ನಮ್ಮ ಸುತ್ತಿನ ಗಾದೆಗಳು, ಶಿವಗಂಗೆ ಸುತ್ತಿನ ಗಾದೆಗಳು, ಜಾನಪದ ಕಲಬೆರಕೆತನ (ಜಾನಪದ) ಅವರ ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಎರಡು ಕಥೆಗಳಿಗೆ ಬಹುಮಾನ ಬಂದಿತ್ತು. ...
READ MORE