About the Author

ಕಥೆಗಾರ ಪ್ರೊ. ಸುಧಾಕರ ಅವರು ಬೆಂಗಳೂರು ಜಿಲ್ಲೆ ಮಾಗಡಿ ತಾಲ್ಲೂಕಿನ ಎಣ್ಣೆಗೆರೆ ಗ್ರಾಮದವರು. ಗ್ರಾಮೀಣ ಬದುಕಿನ ಸಂಗತಿಗಳ ಆಧರಿಸಿ ಕತೆ ಕಟ್ಟುವ ಸುಧಾಕರ ಅವರು  ಸೃಜನಶೀಲ ಬರವಣಿಗೆಯ ಜೊತೆಗೆ ಜಾನಪದ ಮತ್ತು ಶಿಷ್ಟ ಸಾಹಿತ್ಯ ಅಧ್ಯಯನಗಳಲ್ಲಿ ಆಸಕ್ತರಾಗಿದ್ದರು.

ಕಣ್ಣಿ ಕಿತ್ತ ಹಸು, ಗರಿಕೆಬೇರು, ಬಾಡುಬಕ್ಕನ ಮುಳ್ಳು (ಕಥಾ ಸಂಕಲನಗಳು), ಕುವೆಂಪು ಸಾಹಿತ್ಯ ಸಮೀಕ್ಷೆ, ಕನಕದಾಸರ ರಾಗಿರಾಮಾಯಣದರ್ಶನ (ವಿಮರ್ಶಾ ಲೇಖನಗಳು), ಜನಪದ ಬೆಡಗಿನ ವಚನಗಳು, ನಮ್ಮ ಸುತ್ತಿನ ಗಾದೆಗಳು, ಶಿವಗಂಗೆ ಸುತ್ತಿನ ಗಾದೆಗಳು, ಜಾನಪದ ಕಲಬೆರಕೆತನ (ಜಾನಪದ) ಅವರ ಪ್ರಕಟಿತ ಕೃತಿಗಳು. ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆಯಲ್ಲಿ ಅವರ ಎರಡು ಕಥೆಗಳಿಗೆ ಬಹುಮಾನ ಬಂದಿತ್ತು.

ಸುಧಾಕರ

(31 May 1933-24 Aug 2013)