ಕಳ್ಳುಬಳ್ಳಿ

Author : ಬಿ.ಟಿ.ಜಾಹ್ನವಿ

Pages 236

₹ 275.00




Year of Publication: 2014
Published by: ಸುಯೋಧನ ಪ್ರಕಾಶನ
Address: ಹಗರಿಬೊಮ್ಮನಹಳ್ಳಿ- 583212, ಬಳ್ಳಾರಿ ಜಿಲ್ಲೆ
Phone: 08397238628

Synopsys

‘ಕಳ್ಳುಬಳ್ಳಿ’ ಲೇಖಕಿ ಬಿ.ಟಿ. ಜಾಹ್ನವಿ ಅವರ ಕತಾಸಂಕಲನ. ಇಲ್ಲಿ ಜಾಹ್ನವಿ ಅವರು ನೂರಕ್ಕೆ ನೂರರಷ್ಟು ಕನ್ನಡದ, ಕರ್ನಾಟಕದ ಮತ್ತು ತನ್ನ ಕಾಲದ ಭಾಷೆಯನ್ನು ತಮ್ಮ ಕಥೆಗಳಲ್ಲಿ ಬಳಸಿದ್ದಾರೆ. ನಮ್ಮ ಸಂವೇದನೆ, ತಿಳಿವಳಿಕೆ ಮತ್ತು ನಾವು ಕಟ್ಟಿಕೊಡುವ ಲೋಕ ಇವೆಲ್ಲವೂ ನಿಜವಾಗುವುದು ಭಾಷೆಯಿಂದ ಮಾತ್ರವೇ. ಇಲ್ಲಿ ಸಂಸ್ಕೃತ ಪದಗಳ ಬಳಕೆ ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಜಾಹ್ನವಿ ಅವರ ಕತೆಗಳ ಒಂದು ಲಕ್ಷಣವೆಂದರೆ ಗಂಡು ಹೆಣ್ಣುಗಳ ಸಂಬಂಧದ ಹಲವು ಸೂಕ್ಷ್ಮಗಳನ್ನು ಹಲವು ನೆಲೆಗಳಲ್ಲಿ ನೋಡಿರುವುದು. ಕಥಾ ಸಾಹಿತ್ಯದಲ್ಲಿ ಇದು ಬಹಳ ಕಷ್ಟದ ಕೆಲಸ. ಶಿವರಾಮ ಕಾರಂತರಿಂದ ಹಿಡಿದು ವೀಣಾಶಾಂತೇಶ್ವರ ಮತ್ತು ವೈದೇಹಿ ವರೆಗೆ ಅನೇಕ ಲೇಖಕರು ಇಂತಹ ಪ್ರಯತ್ನ ಮಾಡಿದ್ದಾರೆ.

ದೇಹ, ವಿಚಾರಗಳು ಮತ್ತು ಭಾವನೆಗಳ ನಡುವಿನ ಕೊಡುಕೊಳ್ಳುವ ಸಂಬಂಧಗಳನ್ನು ಅಂತೆಯೇ ಗಡಿಗೆರೆಗಳನ್ನು ಗುರುತಿಸುವುದು ಕಷ್ಟ. ಜಾಹ್ನವಿ ಅವರು ಆಧುನಿಕವೆಂದು ತೋರುವಾಗಲೂ ಎಲ್ಲಾ ಕಾಲಕ್ಕೂ ನಿಜವಿರಬಹುದಾದ ಸತ್ಯಗಳನ್ನು ಹುಡುಕಿ ತೆಗೆದಿದ್ದಾರೆ. ಒರಟುತನ, ಸೌಮ್ಯತೆ, ನಾಜೂಕು, ಹುಸಿತನ ಮುಂತಾದ ಸಂಗತಿಗಳನ್ನು ಎಚ್ಚರಿಕೆಯಿಂದ ಶೋಧಿಸುವ ಕೆಲಸ ಇಲ್ಲಿ ನಡೆದಿದೆ.

About the Author

ಬಿ.ಟಿ.ಜಾಹ್ನವಿ

ಜಾಹ್ನವಿಯವರು ಬೆಂಗಳೂರಿನಲ್ಲಿ 1963ರಲ್ಲಿ ಜನಿಸಿದರು. ತಂದೆ ಡಾ.ಬಿ.ಎಂ.ತಿಪ್ಪೇಸ್ವಾಮಿ ಪ್ರಖ್ಯಾತ ನೇತ್ರತಜ್ಞರು. ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಜಾಹ್ನವಿ ಹಲವು ಕೃತಿಗಳನ್ನ ರಚಿಸಿದ್ದಾರೆ.  ಅವರ ಕಳೆದು ಕೊಂಡವಳು ಮತ್ತು ಇತರ ಕತೆಗಳು ಎಂಬ ಕಥಾಸಂಕಲನ ಹೆಚ್ಚು ಜನಪ್ರಿಯವಾಗಿದೆ. ತಂದೆಯ ರಾಜಕೀಯ ಜೀವನದ ಪ್ರೇರಣೆಯಿಂದಾಗಿ ರಾಜಕೀಯದಲ್ಲೂ ತೊಡಗಿರುವ ಜಾಹ್ನವಿ ಸೂಕ್ಷ್ಮವಾಗಿ ಬರೆವ ಲೇಖಕಿ. ಕತೆಗಾರ್ತಿಯಾಗಿ ಗುರುತಿಸಿಕೊಂಡಿರುವ ಅವರು ದಲಿತಹೋರಾಟಗಳಲ್ಲೂ ತೊಡಗಿಕೊಳ್ಳುತ್ತಾರೆ. ಅವರ ಕಥೆಗಳಲ್ಲಿ ಹೆಣ್ಣಿನ ಲೈಂಗಿಕ ಸ್ವತಂತ್ರ್ಯದ ಕುರಿತಾದ ವಿಷಯಗಳು ಚರ್ಚೆಯಾಗುತ್ತವೆ. ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿ ಬರೆವ ಜಾಹ್ನವಿ ಸಮಾಜದ ಸಮಸ್ಯೆಗಳಿಗೂ ಮಿಡಿಯುತ್ತಾರೆ.  ...

READ MORE

Related Books