ಜಾಹ್ನವಿಯವರು ಬೆಂಗಳೂರಿನಲ್ಲಿ 1963ರಲ್ಲಿ ಜನಿಸಿದರು. ತಂದೆ ಡಾ.ಬಿ.ಎಂ.ತಿಪ್ಪೇಸ್ವಾಮಿ ಪ್ರಖ್ಯಾತ ನೇತ್ರತಜ್ಞರು. ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಜಾಹ್ನವಿ ಹಲವು ಕೃತಿಗಳನ್ನ ರಚಿಸಿದ್ದಾರೆ. ಅವರ ಕಳೆದು ಕೊಂಡವಳು ಮತ್ತು ಇತರ ಕತೆಗಳು ಎಂಬ ಕಥಾಸಂಕಲನ ಹೆಚ್ಚು ಜನಪ್ರಿಯವಾಗಿದೆ. ತಂದೆಯ ರಾಜಕೀಯ ಜೀವನದ ಪ್ರೇರಣೆಯಿಂದಾಗಿ ರಾಜಕೀಯದಲ್ಲೂ ತೊಡಗಿರುವ ಜಾಹ್ನವಿ ಸೂಕ್ಷ್ಮವಾಗಿ ಬರೆವ ಲೇಖಕಿ. ಕತೆಗಾರ್ತಿಯಾಗಿ ಗುರುತಿಸಿಕೊಂಡಿರುವ ಅವರು ದಲಿತಹೋರಾಟಗಳಲ್ಲೂ ತೊಡಗಿಕೊಳ್ಳುತ್ತಾರೆ. ಅವರ ಕಥೆಗಳಲ್ಲಿ ಹೆಣ್ಣಿನ ಲೈಂಗಿಕ ಸ್ವತಂತ್ರ್ಯದ ಕುರಿತಾದ ವಿಷಯಗಳು ಚರ್ಚೆಯಾಗುತ್ತವೆ. ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿ ಬರೆವ ಜಾಹ್ನವಿ ಸಮಾಜದ ಸಮಸ್ಯೆಗಳಿಗೂ ಮಿಡಿಯುತ್ತಾರೆ.