ಲೇಖಕಿ ಸುಮಂಗಲಾ ಅವರ ಕತೆಗಳ ಸಂಕಲನ ಕೃತಿ ’ ಕಾಲಿಟ್ಟಲ್ಲಿ ಕಾಲುದಾರಿ’.
ಇವರ ಅನೇಕ ಕತೆಗಳು ಹೆಣ್ಣಿನ ಪಲ್ಲಟಗೊಳ್ಳುತ್ತಿರುವ ಲೋಕದೃಷ್ಟಿಯನ್ನು ಸೂಚಿಸುವಂತದ್ದಾಗಿದೆ. ಲೋಕದೊಳಗಿನ ಅನುಸಂಧಾನದ ಗ್ರಹಿಕೆಯನ್ನು ಮುಖಾಮುಖಿಗೊಳಿಸುವ ಇಲ್ಲಿನ ಕತೆಗಳು ಸೂಕ್ಷ್ಮವಾದ ಸಂಗತಿಗಳ ಜೊತೆ ಸಾಗುತ್ತದೆ. ಅನುಭವಗಳ ಮಾನವೀಯ ನೆಲೆಯನ್ನು ಮತ್ತು ಬದುಕನ್ನು ನಿಭಾಯಿಸುವ ಅರಿವನ್ನು ಹೇಳುವ ಕತೆಗಳು ಮುಖ್ಯವಾಗಿವೆ. ಹೆಣ್ಣು ತನ್ನೊಳಗಿನ ಜಗತ್ತಿಗೂ, ತನ್ನೆದುರು ಇರುವ ಜಗತ್ತಿಗೂ ಮೂಖಾಮುಖಿಗೊಳ್ಳುವ ಕಥಾ ಹಂದರ ಈ ಕೃತಿಯಲ್ಲಿದೆ.
ಲೇಖಕಿ, ಕತೆಗಾರ್ತಿ ಮತ್ತು ಅನುವಾದಕಿ ಸುಮಂಗಲಾ ಶಿವಮೊಗ್ಗದ ಸಾಗರದವರು. "ಚರ್ನೋಬಿಲ್ ಪ್ರಾರ್ಥನೆ" ಅವರ ಇತ್ತೀಚಿನ ಅನುವಾದ ಕೃತಿ. “ಹನ್ನೊಂದನೇ ಅಡ್ಡರಸ್ತೆ” ಇವರಿಗೆ ಹೆಸರು ತಂದುಕೊಟ್ಟ ಕಥಾ ಸಂಕಲನ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡಲು ಬಾಲ್ಯದಲ್ಲಿ ಕಂಡ ಅಪ್ಪನ ಪುಸ್ತಕ-ಪ್ರೀತಿಯೇ ಕಾರಣ ಎನ್ನುತ್ತಾರೆ. ಅವರ ಮೊದಲಕತೆ ಸೀತಾಳೆ ಹೂ ಕನ್ನಡ ಕಥಾಲೋಕ ಎದ್ದುನಿಂತು ಗಮನಿಸುವಷ್ಟು ಪರಿಣಾಮಕಾರಿಯಾಗಿದೆ. ಕನ್ನಡದ ಹಲವಾರು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡ ಹಲವು ಕತೆಗಳು ಸೀತಾಳೆ ಹೂ ಮತ್ತು ಇತರ ಕಥೆಗಳು ಎಂಬ ಇವರ ಮೊದಲ ಕಥಾಸಂಕಲನದಲ್ಲಿ ಕಾಣಿಸಿಕೊಂಡವು. ತದನಂತರ 2005ರಲ್ಲಿ ಜುಮುರು ...
READ MORE