ಲೇಖಕಿ, ಕತೆಗಾರ್ತಿ ಮತ್ತು ಅನುವಾದಕಿ ಸುಮಂಗಲಾ ಶಿವಮೊಗ್ಗದ ಸಾಗರದವರು. "ಚರ್ನೋಬಿಲ್ ಪ್ರಾರ್ಥನೆ" ಅವರ ಇತ್ತೀಚಿನ ಅನುವಾದ ಕೃತಿ. “ಹನ್ನೊಂದನೇ ಅಡ್ಡರಸ್ತೆ” ಇವರಿಗೆ ಹೆಸರು ತಂದುಕೊಟ್ಟ ಕಥಾ ಸಂಕಲನ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡಲು ಬಾಲ್ಯದಲ್ಲಿ ಕಂಡ ಅಪ್ಪನ ಪುಸ್ತಕ-ಪ್ರೀತಿಯೇ ಕಾರಣ ಎನ್ನುತ್ತಾರೆ. ಅವರ ಮೊದಲಕತೆ ಸೀತಾಳೆ ಹೂ ಕನ್ನಡ ಕಥಾಲೋಕ ಎದ್ದುನಿಂತು ಗಮನಿಸುವಷ್ಟು ಪರಿಣಾಮಕಾರಿಯಾಗಿದೆ.
ಕನ್ನಡದ ಹಲವಾರು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡ ಹಲವು ಕತೆಗಳು ಸೀತಾಳೆ ಹೂ ಮತ್ತು ಇತರ ಕಥೆಗಳು ಎಂಬ ಇವರ ಮೊದಲ ಕಥಾಸಂಕಲನದಲ್ಲಿ ಕಾಣಿಸಿಕೊಂಡವು. ತದನಂತರ 2005ರಲ್ಲಿ ಜುಮುರು ಮಳೆ ಮತ್ತು 2009ರಲ್ಲಿ ಕಾಲಿಟ್ಟಲ್ಲಿ ಕಾಲುದಾರಿ ಎಂಬ ಕಥಾಸಂಕಲನಗಳು ಬೆಳಕು ಕಂಡವು. ಎಚ್.ಎಂ.ಟಿ. ಕಥಾ ಪ್ರಶಸ್ತಿ, ಉತ್ಥಾನ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ ಮೆಚ್ಚುಗೆ ಬಹುಮಾನ, ವಿಜಯ ಕರ್ನಾಟಕ ಕಥಾಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, ಮಾಸ್ತಿ ಕಥಾ ಪುರಸ್ಕಾರ ಲಭಿಸಿದೆ.
ಬುಕ್ ಬ್ರಹ್ಮದ ಮುಖಾ ಮುಖಿ ಕಾರ್ಯಕ್ರಮದಲ್ಲಿ ಖ್ಯಾತ ಕತೆಗಾರ್ತಿ ಸುಮಂಗಳಾ ಅವರು ತಮ್ಮ ಬರಹಗಳ ಒಳನೋಟಗಳ ಕುರಿತಾಗಿ ಮನಬಿಚ್ಚಿ ಮಾತನಾಡಿದ್ದಾರೆ. ಅವರ ವಿಶೇಷ ಸಂದರ್ಶನ ಬುಕ್ ಬ್ರಹ್ಮದ ಸಂಪಾದಕ ದೇವು ಪತ್ತಾರ ಅವರಿಂದ...