`ಇನಾಸ ಮಾಮನ ಟಪಾಲು ಚೀಲ' ಸುರೇಶ ಹೆಗಡೆ ಅವರ ಮೊದಲನೆ ಕಥಾ ಸಂಕಲನ. ಬೆಟ್ಟದ ನೆತ್ತಿಯ ಮೇಲೆ ಹುಟ್ಟಿದ ಝರಿ ಕೆಳ ಮುಖವಾಗಿ ಇಳಿಜಾರಿನಲ್ಲಿ ಹರಿವಂತೆ ಇಲ್ಲಿಯ ಕತಾ ಜಗತ್ತು ಸರಾಗ ಹಾಗೂ ಉಲ್ಲಾಸಭರಿತವಾಗಿದೆ. ಮುನ್ನುಡಿಯಲ್ಲಿ ಕತೆಗಾರ ಶ್ರೀಧರ ಬಳಗಾರ ಅವರು ‘ನಿರೂಪಕನೂ ಸೇರಿದಂತೆ ಕಥೆಯ ಪಾತ್ರಗಳು ಅನುಭವದ ತೀವ್ರತೆಯನ್ನು ಕಳೆದುಕೊಂಡು ವರದಿ ಒಪ್ಪಿಸುವ ವೀಕ್ಷಕರಾಗಿದ್ದು ಬಿಡಬಹುದು. ಕತೆ ಜರುಗುವ ಪರಿಸರದ ವಿವರಗಳು ಅದೆಷ್ಟು ಜೀವಂತವಾಗಿದ್ದರೂ ಅವು ಪಾತ್ರಗಳ ವರ್ತನಾಗುಣಗಳಾಗಿ ಪರಿವರ್ತನೆಯಾಗದೇ ಹೋದರೆ ಸಪಾಟಾಗಿ ತೇಲಿಬಿಡಬಹುದು. ಅಂದರೆ, ಪಾತ್ರ ಮತ್ತು ಪರಿಸರದ ನಡುವಿನ ಹಾಸುಹೊಕ್ಕಿನ ನೇಯ್ದೆ ಸಾಧ್ಯವಾಗದೆ ಹೋಗಬಹುದು. ಕಥನಕ್ಷಣದ ವರ್ತಮಾನಕ್ಕೆ ಸ್ಪಂದಿಸದ ನೆನಪಿನ ವಿವರಗಳು ಚಂದವಾಗಿದ್ದರೂ ಜಾತ್ರೆಯ ಬೀದಿ ಅಂಗಡಿಯಲ್ಲಿ ಮಾರುವ ಬಲೂನಿನಲ್ಲಿ ಬರುತ್ತದೆ. ಈ ವಾಕ್ಯ ಮುಂಬೈ ನಗರದ ಭಯಾನಕತೆಯನ್ನು ಸೂಚಿಸುತ್ತದೆ.” ಎಂದಿದ್ದಾರೆ.
ಕತೆಗಾರ ಸುರೇಶ ಹೆಗಡೆ ಅವರು ಉತ್ತರ ಕನ್ನಡದ ಕರ್ಕಿಯವರು. 1952 ರಲ್ಲಿ ಜನಿಸಿದರು. ಹೊನ್ನಾವರ ಕಾಲೇಜಿನಿಂದ ವಿಜ್ಞಾನ ಪದವಿಧರರು.1973 ರಲ್ಲಿ ಉದ್ಯೋಗಕ್ಕೆ ಸೇರಿ, ನಂತರ ಕಾನೂನು ಪದವಿ ಪಡೆದರು. ತದನಂತರ, ಮಾನವ ಸಂಪನ್ಮೂಲ ಹಾಗೂ ಮಾನವ ಹಕ್ಕುಗಳ ಮೇಲೆ ಸ್ನಾತಕೋತ್ತರ ಡಿಪ್ಲೋಮಾ ಪಡೆದರು. ಕರ್ನಾಟಕ ವಿದ್ಯುತ್ ನಿಗಮದ ಕಾಳಿ ಯೋಜನೆಯಲ್ಲಿ 38 ವರ್ಷ ಸೇವೆ ಸಲ್ಲಿಸಿ, ಅಧಿಕಾರಿಯಾಗಿ 2012ರಲ್ಲಿ ನಿವೃತ್ತಿ ಹೊಂದಿದರು. ಪ್ರಸ್ತುತ ಹುಬ್ಬಳ್ಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿ ಕಲಾವಿದರಾಗಿ ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಅವರ ಚೊಚ್ಚಲ ಕೃತಿ ‘ಇನಾಸ ಮಾಮನ ಟಪಾಲು ಚೀಲ’ ಕತಾ ಸಂಕಲನ ...
READ MORE