ಕತೆಗಾರ ಸುರೇಶ ಹೆಗಡೆ ಅವರು ಉತ್ತರ ಕನ್ನಡದ ಕರ್ಕಿಯವರು. 1952 ರಲ್ಲಿ ಜನಿಸಿದರು. ಹೊನ್ನಾವರ ಕಾಲೇಜಿನಿಂದ ವಿಜ್ಞಾನ ಪದವಿಧರರು.1973 ರಲ್ಲಿ ಉದ್ಯೋಗಕ್ಕೆ ಸೇರಿ, ನಂತರ ಕಾನೂನು ಪದವಿ ಪಡೆದರು. ತದನಂತರ, ಮಾನವ ಸಂಪನ್ಮೂಲ ಹಾಗೂ ಮಾನವ ಹಕ್ಕುಗಳ ಮೇಲೆ ಸ್ನಾತಕೋತ್ತರ ಡಿಪ್ಲೋಮಾ ಪಡೆದರು. ಕರ್ನಾಟಕ ವಿದ್ಯುತ್ ನಿಗಮದ ಕಾಳಿ ಯೋಜನೆಯಲ್ಲಿ 38 ವರ್ಷ ಸೇವೆ ಸಲ್ಲಿಸಿ, ಅಧಿಕಾರಿಯಾಗಿ 2012ರಲ್ಲಿ ನಿವೃತ್ತಿ ಹೊಂದಿದರು.
ಪ್ರಸ್ತುತ ಹುಬ್ಬಳ್ಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಧಾರವಾಡ ಆಕಾಶವಾಣಿಯಲ್ಲಿ ಕಲಾವಿದರಾಗಿ ಅನೇಕ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಅವರ ಚೊಚ್ಚಲ ಕೃತಿ ‘ಇನಾಸ ಮಾಮನ ಟಪಾಲು ಚೀಲ’ ಕತಾ ಸಂಕಲನ 2020ರಲ್ಲಿ ಪ್ರಕಟಗೊಂಡಿದೆ.