‘ಹುಡುಕಾಟ’ ಅಬ್ಬಾಸ್ ಮೇಲಿನಮನಿ ಅವರ ಕಥಾಸಂಕಲನವಾಗಿದೆ. ಇವರ ಕಥೆಗಳಲ್ಲಿ ಬರುವ ಪಾತ್ರಗಳು ಎಲ್ಲೂ ಅಡಗಿಕೊಳ್ಳದೆ ದೈನಂದಿನ ಬದುಕಿನಲ್ಲಿ ನಿರಾಯಾಸವಾಗಿ ಗುರುತಿಸಲ್ಪಡು ವಂಥವು.
ಕನ್ನಡದ ಜನಪ್ರಿಯ ಕಥೆಗಾರರಾದ ಅಬ್ಬಾಸ್ ಮೇಲಿನಮನಿ ಹುಟ್ಟೂರು ಬಾಗಲಕೋಟೆ. 1954 ಮಾರ್ಚ್ 05ರಂದು ಜನಸಿದ ಇವರು ಪದವಿ ಶಿಕ್ಷಣದವರೆಗಿನ ಬಾಗಲಕೋಟೆಯ ನಾನಾ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದ ಇವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರು ಬರೆದಿರುವ ಕವನ ಸಂಕಲನಗಳು: ಕಥೆಯಾದಳು ಹುಡುಗಿ, ಭಾವೈಕ್ಯ ಬಂಧ, ಪ್ರೀತಿ ಬದುಕಿನ ಹಾಡು. ಕಥಾ ಸಂಕಲನಗಳು: ಪ್ರೀತಿಸಿದವರು, ಕಣ್ಣ ಮುಂದಿನ ಕಥೆ, ಅರ್ಧಸತ್ಯಗಳು ಇತ್ಯಾದಿ. ಕಾದಂಬರಿಗಳು: ಜನ್ನತ್ ಮೊಹಲ್ಲ. ಲೇಖನ: ಸೌಹಾರ್ದ ಸಂಸ್ಕೃತಿ, ಸಂಪಾದಿತ: ಸಣ್ಣಕತೆ, ಕ್ಯಾದಗಿ ಪ್ರಜ್ಞೆ ಮುಳುಗದ ಕಥೆಗಳು. ಇವರಿಗೆ ಮಂಗಳೂರಿನ ಮಹ್ಯುದ್ದೀನ ಸಾಹಿತ್ಯ ಪ್ರತಿಷ್ಠಾನ ...
READ MOREಹೊಸತು- ಮೇ -2003
ಕಣ್ಮುಂದೆ ನಡೆಯುವ ಎಲ್ಲ ಘಟನೆಗಳನ್ನು ಕಥೆಗಾರ ಅಬ್ಬಾಸ್ ತುಂಬ ಆಳವಾಗಿ ಎಚ್ಚರದಿಂದ ಗ್ರಹಿಸುತ್ತಲೇ ಕಥೆಗಳ ರೂಪು ಕೊಟ್ಟುಬಿಡುತ್ತಾರೆ. ಇವರ ಕಥೆಗಳಲ್ಲಿ ಬರುವ ಪಾತ್ರಗಳು ಎಲ್ಲೂ ಅಡಗಿಕೊಳ್ಳದೆ ದೈನಂದಿನ ಬದುಕಿನಲ್ಲಿ ನಿರಾಯಾಸವಾಗಿ ಗುರುತಿಸಲ್ಪಡು ವಂಥವು. ದಿಟ್ಟ ನಿಲುವು ತಳೆದ ಪಾತ್ರಗಳ ಮೂಲಕ ಚಾಟಿ ಏಟಿನಂತೆ ಬೀಸುವ ಮಾತುಗಳು ಸಾಕಷ್ಟು ಚುರುಕು ಮುಟ್ಟಿಸುತ್ತವೆ. ಸಂಕಲನದಲ್ಲಿ ಎಂಟು ಕಥೆಗಳಿದ್ದು ಸಾಮಾನ್ಯ ಜನರ ನೋವಿಗೆ ಸ್ಪಂದಿಸಿವೆ.