ಲೇಖಕ ವೆಂಕಟೇಶ ಕೆ. ಜನಾದ್ರಿ ಅವರ ಕಥಾ ಸಂಕಲನ- ‘ಹೊರ ಮನದ ಒಳ ಬೇಗುದಿಗಳು’. ಅಮೂರ್ತ ಭಾವಗಳಿಗೆ ಮೂರ್ತರೂಪ ಕೊಟ್ಟ ಎಂಟು ಕಥೆಗಳಿವೆ. ವ್ಯಕ್ತಿ ಮನಸ್ಸು ಮತ್ತು ಸನ್ನಿವೇಶಗಳಿಗೆ ಕಾಲ್ಪನಿಕತೆಯನ್ನು, ಸಮಾನತೆಯನ್ನು ಒಂದಿಷ್ಟು ಚಂದವನ್ನು ಮತ್ತು ರಸ ವತ್ತತೆ ಸಾರವನ್ನು ಬೆರೆಸಿರುವುದು ಓದುಗನ ಅನುಭವಕ್ಕೆ ಬರುತ್ತದೆ. ಪ್ರತಿ ಕಥೆಯು ವಿಶೇಷ. ವ್ಯಕ್ತಿಗಳ ಮನಸ್ಸಿನಲ್ಲಿ ಮಿಡಿಯುವ ಸನ್ನಿವೇಶವನ್ನು ಅರ್ಥವತ್ತಾಗಿ ಮೂಡಿಸಲಾಗಿದೆ. ಪ್ರತಿಯೊಂದು ಪರಿವರ್ತನೆಗೆ ಪಾತ್ರವನ್ನು ಬಳಸಿಕೊಳ್ಳಲಾಗಿದೆ. ಪ್ರೀತಿ, ಪ್ರೇಮ,ಅನುರಾಗ, ದಾಂಪತ್ಯ ಜೊತೆ ಸರಸ ವಿಚಾರ, ಅಭಿವೃದ್ಧಿ, ಸಂಸ್ಕೃತಿ ಒಂದೊಂದು ಕಥೆಗಳು ಹೊಸ ಸ್ಪರ್ಶ ನೀಡುತ್ತವೆ. ಶರಣರ ಚಿಂತನ ದಾರಿಗಳು ಇಲ್ಲಿಯ ಕಥೆಗಳಿಗೆ ಸ್ಫೂರ್ತಿಯಾಗಿದ್ದು ಸ್ಪಷ್ಟ.
ಲೇಖಕ ವೆಂಕಟೇಶ ಕೆ. ಜನಾದ್ರಿ ಅವರು ಮೂಲತಃ ಕಲಬುರಗಿಯವರು. ತಂದೆ ಕೃಷ್ಣಪ್ಪ ಜನಾದ್ರಿ ತಾಯಿ ಸರಸ್ವತಿ. ಸ್ನಾತಕೋತ್ತರ ವಾಣಿಜ್ಯ ಪದವೀಧರರು. ಪ್ರಸ್ತುತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃತಿಗಳು: ವಚನಗಳ ಬೆಳಕಲ್ಲಿ ಸಕಾರಾತ್ಮಕ ಧೋರಣೆ, ಆಂತರ್ಯದ ಬಯಲು, ಅಂತರಂಗದೊಳಗಣ ಬಹಿರಂಗ, ನಡೆಯೊಳಗಣ ನುಡಿ, ಸತ್ಪಾತ್ರಕ್ಕೆ ಸಲ್ಲಿಸಯ್ಯ, ಒಡಲುಗೊಂಡವರಳಲು, ನಡೆದರೆ ಲಿಂಗಮೆಚ್ಚಿ, ಕೊರಡು ಕೊನರಿದಾಗ, ಎನ್ನಲ್ಲಿ ಏನುಂಟೆಂದು, ಕಥಾ ಸಂಕಲನಗಳು: ಹನಿಗಳ ನರ್ತನ, ಮೌನದೊಳಗಣ ಕಥೆಗಳು, ಹೊರಮನದ ಒಳಬೇಗುದಿಗಳು. ಪ್ರಶಸ್ತಿ-ಪುರಸ್ಕಾರಗಳು: ಫ.ಗು.ಹಳಕಟ್ಟಿ ಪ್ರಶಸ್ತಿ, ಕರ್ನಾಟಕ ರಾಜ್ಯಪಾಲರ ಪ್ರಶಸ್ತಿ, ಬಸವ ಸಮಿತಿ ಪ್ರಶಸ್ತಿ, ಲಕ್ಷ್ಮೀ ಬಾಯಿ ಜಾಜಿ ಸ್ಮಾರಕ ...
READ MORE