ಲೇಖಕ ವೆಂಕಟೇಶ ಕೆ. ಜನಾದ್ರಿ ಅವರು ಮೂಲತಃ ಕಲಬುರಗಿಯವರು. ತಂದೆ ಕೃಷ್ಣಪ್ಪ ಜನಾದ್ರಿ ತಾಯಿ ಸರಸ್ವತಿ. ಸ್ನಾತಕೋತ್ತರ ವಾಣಿಜ್ಯ ಪದವೀಧರರು. ಪ್ರಸ್ತುತ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಸಹಾಯಕ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೃತಿಗಳು: ವಚನಗಳ ಬೆಳಕಲ್ಲಿ ಸಕಾರಾತ್ಮಕ ಧೋರಣೆ, ಆಂತರ್ಯದ ಬಯಲು, ಅಂತರಂಗದೊಳಗಣ ಬಹಿರಂಗ, ನಡೆಯೊಳಗಣ ನುಡಿ, ಸತ್ಪಾತ್ರಕ್ಕೆ ಸಲ್ಲಿಸಯ್ಯ, ಒಡಲುಗೊಂಡವರಳಲು, ನಡೆದರೆ ಲಿಂಗಮೆಚ್ಚಿ, ಕೊರಡು ಕೊನರಿದಾಗ, ಎನ್ನಲ್ಲಿ ಏನುಂಟೆಂದು, ಕಥಾ ಸಂಕಲನಗಳು: ಹನಿಗಳ ನರ್ತನ, ಮೌನದೊಳಗಣ ಕಥೆಗಳು, ಹೊರಮನದ ಒಳಬೇಗುದಿಗಳು.
ಪ್ರಶಸ್ತಿ-ಪುರಸ್ಕಾರಗಳು: ಫ.ಗು.ಹಳಕಟ್ಟಿ ಪ್ರಶಸ್ತಿ, ಕರ್ನಾಟಕ ರಾಜ್ಯಪಾಲರ ಪ್ರಶಸ್ತಿ, ಬಸವ ಸಮಿತಿ ಪ್ರಶಸ್ತಿ, ಲಕ್ಷ್ಮೀ ಬಾಯಿ ಜಾಜಿ ಸ್ಮಾರಕ ದತ್ತಿ ಪ್ರಶಸ್ತಿ, ದೇವಾನಾಂಪ್ರೀಯ ಪ್ರಶಸ್ತಿ, ಅಡ್ವೆಸರ್ ಪತ್ರಿಕೆ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ,
ಡಾ. ದ.ರಾ.ಬೇಂದ್ರೆ ಪ್ರಶಸ್ತಿ, ಸುವರ್ಣಶ್ರೀ ಪ್ರಶಸ್ತಿ.