ಲೇಖಕಿ ಸುಮಂಗಲಾ ಅವರು ಬರೆದ ಕಥೆಗಳ ಸಂಕಲನ-‘ಹನ್ನೊಂದನೆ ಅಡ್ಡರಸ್ತೆ’ ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
ಲೇಖಕಿ, ಕತೆಗಾರ್ತಿ ಮತ್ತು ಅನುವಾದಕಿ ಸುಮಂಗಲಾ ಶಿವಮೊಗ್ಗದ ಸಾಗರದವರು. "ಚರ್ನೋಬಿಲ್ ಪ್ರಾರ್ಥನೆ" ಅವರ ಇತ್ತೀಚಿನ ಅನುವಾದ ಕೃತಿ. “ಹನ್ನೊಂದನೇ ಅಡ್ಡರಸ್ತೆ” ಇವರಿಗೆ ಹೆಸರು ತಂದುಕೊಟ್ಟ ಕಥಾ ಸಂಕಲನ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕಾಲಿಡಲು ಬಾಲ್ಯದಲ್ಲಿ ಕಂಡ ಅಪ್ಪನ ಪುಸ್ತಕ-ಪ್ರೀತಿಯೇ ಕಾರಣ ಎನ್ನುತ್ತಾರೆ. ಅವರ ಮೊದಲಕತೆ ಸೀತಾಳೆ ಹೂ ಕನ್ನಡ ಕಥಾಲೋಕ ಎದ್ದುನಿಂತು ಗಮನಿಸುವಷ್ಟು ಪರಿಣಾಮಕಾರಿಯಾಗಿದೆ. ಕನ್ನಡದ ಹಲವಾರು ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಪ್ರಕಟಗೊಂಡ ಹಲವು ಕತೆಗಳು ಸೀತಾಳೆ ಹೂ ಮತ್ತು ಇತರ ಕಥೆಗಳು ಎಂಬ ಇವರ ಮೊದಲ ಕಥಾಸಂಕಲನದಲ್ಲಿ ಕಾಣಿಸಿಕೊಂಡವು. ತದನಂತರ 2005ರಲ್ಲಿ ಜುಮುರು ...
READ MORE