ಲೇಖಕ ಅಕ್ಬರ್ ಸಿ. ಕಾಲಿಮಿರ್ಚಿ ಅವರ ಕಥಾ ಸಂಕಲನ ʼಹೆಣದ ದಿಬ್ಬʼ. ಕಾಡಿದ ನೆನಪಿಂದ, ಮರೆಸಲಾಗದ ವಸ್ತುವಿನಿಂದ ಈ ಕಥಾ ಸಂಕಲನದ ಕಥೆಗಳು ಹುಟ್ಟಿಗೊಂಡಿವೆ ಎನ್ನುತ್ತಾರೆ ಲೇಖಕರು. ಬರಹಗಾರ ಜಾಣಗೆರೆ ವೆಂಕಟರಾಮಯ್ಯ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ʼವಿಶೇಷವಾಗಿ ಗುರುತಿಸಬಹುದಾದ ನಾಲ್ಕಾರು ಕತೆಗಳಿರುವುದು ಕೃತಿಯ ಮೆರುಗು ಹೆಚ್ಚಿಸಲು ಸಹಕಾರಿಯಾಗಿದೆ. ʼಹೆಣದ ದಿಬ್ಬʼ ʼಕರಿನಿಂಗʼ ʼಮಾ ಕಿ ದುವಾʼ ಮತ್ತು ʼಸ್ವಾವಲಂಬಿʼ ಎಂಬ ಕತೆಗಳಿವೆ. ಈ ಕತೆಗಳಲ್ಲಿ ವಿಶಿಷ್ಟ ವಸ್ತವೂ ಇದೆ., ಓದುಗರನ್ನು ಭಾವುಕ ಲೋಕಕ್ಕೆ ಕರೆದೊಯ್ಯಬಹುದಾದ ನಿರೂಪಣೆ ಇದೆ. ಹಾಗೇ ಮನ ಕಲಕುವ ಕಥನಗಾರಿಕೆಯೂ ಇರುವುದರಿಂದ ಕತೆಗಾರರ ಬಗ್ಗೆ ಹೆಮ್ಮೆ ಮೂಡುತ್ತದೆ.ʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಲೇಖಕ ಅಕ್ಬರ್ ಸಿ. ಕಾಲಿಮಿರ್ಚಿ ಮೂಲತಃ ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣವನ್ನ ಹುಟ್ಟೂರಿನಲ್ಲಿ, ನಂತರ ಬೆಂಗಳೂರಿನಲ್ಲಿ ಡಿಪ್ಲೋಮಾ, ರಾಮನಗರ ಜಿಲ್ಲೆಯಲ್ಲಿ ಔಷದ ವಿಜ್ಞಾನ ಪದವಿ ಪಡೆದರು. ಕಾವ್ಯ, ಮಕ್ಕಳ ಕವಿತೆ, ಕತೆ, ಜೀವನ ಚರಿತ್ರೆ, ಲೇಖನ, ಸಂಪಾದನೆ, ಕಥಾ ಸಂಕಲನ ಸೇರಿ 23 ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳು: ಆಶಯ, ಕಾಚಕ್ಕಿ, ಅಮಲ, ಕತ್ತಲೆಯ ಪ್ರೀತಿಗೆ, ಗಾಳಿ ಜೋಗುಳ, ಒಡಲ ಉರಿಯ ನೆನೆದು, ಬಂದೂಕಿಗೆ ಜೀವನವಿಲ್ಲ( ಕವನ ಸಂಕಲನಗಳು). ಬಾಪು ಪಾಪು, ರೈಲು ಗಾಡಿ, ಪುಟ್ಟಿಯ ಆಸೆ (ಮಕ್ಕಳ ಕವನ ಸಂಕಲನಗಳು), ಸಿದ್ಧಿಪುರುಷ ...
READ MORE