ಲೇಖಕ ’ಕು. ಗೋ' ಖ್ಯಾತಿಯ ಎಚ್. ಗೋಪಾಲಭಟ್ಟರು ಬರೆದಿರುವ ಕಥಾ ಸಂಕಲನ ಕೃತಿ ’ಎತ್ತಣಿಂದೆತ್ತ...ʼ. ಇವರ ಆಯ್ದ ಕಥೆಗಳ ಈ ಸಂಗ್ರಹದಲ್ಲಿ ತಿಳಿಹಾಸ್ಯದ, ಮೇಲುದನಿಯ ಬರಹಗಳ ಆಳದಲ್ಲಿ ಗಂಭೀರ ಚಿಂತನೆಯ ಸೆಳಹುಗಳಿವೆ. ಬದುಕಿನ ವಿವಿಧ ಮಗ್ಗುಲುಗಳ ಸೂಕ್ಷ್ಮದರ್ಶನವಿದೆ. 2002ರಲ್ಲಿ ಕೃತಿಯು ಮೊದಲ ಮುದ್ರಣವನ್ನು ಕಂಡಿತ್ತು. ಬಳಿಕ 2015ರಲ್ಲಿ ಮರು ಮುದ್ರಣವಾಗಿ ಇದೀಗ 2022ರಲ್ಲಿ ಮೂರನೇ ಮುದ್ರಣಕ್ಕೂ ಸಾಕ್ಷಿಯಾಗಿದೆ.
ಇನ್ನು, ಗುರುರಾಜ ಮಾರ್ಪಳ್ಳಿ ಅವರು ಪುಸ್ತಕದಲ್ಲಿ ಮುನ್ನುಡಿಯ ಮಾತುಗಳನ್ನು ಬರೆದಿದ್ದು, "ಬಾಳಿನ ಆಪ್ತ ಸಂಗತಿಗಳಿಂದ, ವಯಸ್ಸಿನ ಅನುಭವಗಳಿಂದ ಮೂಡಿರುವ ಈ ಸಂಕಲನದ ಕತೆಗಳಲ್ಲಿ ಕಥಾ ಸ್ವರೂಪದ ಚೌಕಟ್ಟನ್ನೂ ಹೊಂದದೆ ಓದಿಸಿಕೊಳ್ಳುವ ಗುಣ ಕು.ಗೋ ಅವರ ಕತೆಗಳಲ್ಲಿವೆ. 'ವಸೂಲಿ' ಕತೆಯಲ್ಲಿ ಮನುಷ್ಯನ ಔದಾರ್ಯ ಕಂಡರೆ, 'ನಂಬಿ ಕೆಟ್ಟವರಿಲ್ಲವೆ' ಕತೆ ಕೈ ಮೀರುವ ಬದುಕನ್ನು ಕುರಿತು ಹೇಳಿದೆ.
'ಜೈ ಶಕ್ತಿಮಾನ್' ಯುವಪೀಳಿಗೆಯ ಕುರಿತು ಗಾಢ ನಿಷ್ಕಳಂಕ ಪ್ರೀತಿ ಇಟ್ಟಿರುವ ಕತೆಯಾದರೆ, ಒಂದು ಸಾವಿನ ಬಳಿಕ ದೇಹದ ಯಾತನಾಮಯ ಬದುಕನ್ನು ತೆರೆದಿಡುತ್ತದೆ. 'ಭಯಕೃದ್' ನಂಬಿಕೆಗಳ ಮಿತಿಯನ್ನು ಕುರಿತು ಹೇಳುತ್ತದೆ. ಕು.ಗೋ ಅವರ ಕತೆಗಳಲ್ಲಿ ಒಂದು ದಟ್ಟ ಅನುಭವದ ವಿವರಗಳಿದ್ದರೂ 'ರಥೋತ್ಸವ' ಕತೆ ಲಘು ಬರಹದಂತಿದೆ. 'ರಂಗೀಲಾ' ಕೂಡಾ ಅಷ್ಟೆ. ಆದರೆ ಮುಖ್ಯವಾಗಿ 'ಎತ್ತಣಿಂದೆತ್ತ' ಮತ್ತು 'ಗತಿ' ಕತೆಗಳಲ್ಲಿ ಕು.ಗೋ ಬರಹದ ಸಾಧ್ಯತೆಯ ಬಗೆಗಳನ್ನು ಬಗೆದಿದ್ದಾರೆ ಎನ್ನಬಹುದು ಎಂದು ಹೇಳಿದ್ದಾರೆ.
'ಕು. ಗೋ' ಎಂದೇ ಜನಪ್ರಿಯರಾಗಿರುವ ಲೇಖಕ ಹೆರ್ಗ ಗೋಪಾಲ ಭಟ್ಟರು ತಮ್ಮ ಪುಸ್ತಕ ಪ್ರೀತಿಗಾಗಿ ಹೆಸರಾದವರು. ಅವರನ್ನು ಕುರಿತು ’ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು.ಗೋ’ ಎಂಬ ಗ್ರಂಥ ಪ್ರಕಟವಾಗಿದೆ. ಗೋಪಾಲ ಭಟ್ಟರು ಜನಿಸಿದ್ದು 1938 ರ ಜೂನ್ 6ರಂದು. ತಂದೆ ಅನಂತ ಪದ್ಮನಾಭ ಭಟ್ಟ ಮತ್ತು ತಾಯಿ ವಾಗ್ದೇವಿಯಮ್ಮ. ಎಸ್. ಎಸ್. ಎಲ್. ಸಿಯಲ್ಲಿ ರಾಜ್ಯಮಟ್ಟದಲ್ಲಿ 37ನೇ Rank ಪಡೆದ ಅವರು ಮೈಸೂರಿನ ಯುವರಾಜ ಕಾಲೇಜು ಮತ್ತು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಮತ್ತು ಬಿ. ಎಸ್ಸಿ ಓದು ಕೈಗೊಂಡರು. ಕಾರಣಾಂತರಗಳಿಂದ ಅವರಿಗೆ ಬಿ. ಎಸ್ಸಿ ಪೂರ್ಣಗೊಳಿಸಲಾಗಲಿಲ್ಲ. ಉದ್ಯೋಗಕ್ಕೆ ಸೇರಿದ ನಂತರ ಅಂಚೆ ತೆರಪಿನ ಮೂಲಕ ...
READ MORE