ಲೇಖಕಿ ಅನುಪಮಾ ಪ್ರಸಾದ್ ಅವರ `ದೂರತೀರ’ ಕಥಾಸಂಕಲನವಾಗಿದೆ. ಕೃತಿಯಲ್ಲಿ ಬಣ್ಣ, ಅಗೋಚರ ವಿಪ್ಲವಗಳು, ಖಾದಿ ಅಂಗಿ, ಕಾಳಿಂದು ಮಡು, ಜಾಜಿ ಗಂಧದ ಜಾಡು.., ದೂರ ತೀರ..ಶೀರ್ಷಿಕೆಯ ಕಥೆಗಳಿವೆ.. ಸಾಹಿತಿ ಜಿ ರಾಜಶೇಖರ ಅವರು ಕಥಾಸಂಕಲನಕ್ಕೆ ಮುನ್ನುಡಿ ಬರೆದು ‘ ಸರಳವೂ, ನೇರವೂ ಆಗಿರುವ ಈ ಕತೆಗಳು ನಿರಾಭರಣ ಸುಂದರಿಯಂತಿದ್ದು, ಅದಕ್ಕೆ ಮುನ್ನುಡಿ ಬರಹದ ಅಲಂಕಾರ ಬೇಕಿಲ್ಲ. ಇಲ್ಲಿನ ಕತೆಗಳು ಸರಳವಾಗಿ ಓದುಗರ ಮನಮುಟ್ಟುವಂತಿದೆ. ಅಲ್ಲದೆ, ಹೆಣ್ಣಿನ ಅಸಹಾಯಕತೆ ಮತ್ತು ಗಂಡಿನ ಸಂವೇದನಾ ಶೂನ್ಯತೆ ಅನುಪಮಾ ತಮ್ಮ ಕಥೆಗಳಲ್ಲಿ ಮತ್ತೆ ಮತ್ತೆ ಶೋಧಿಸುವ ಎರಡು ಅಪರಿಹಾರ್ಯ ಸ್ಥಿತಿಗಳು. ಅನುಪಮಾ ಅವರ ಈ ಸಂಕಲನದ ಎಲ್ಲಾ ಕತೆಗಳೂ-ಪ್ರಾಯಶಃ ‘ಜಾಜಿ ಗಂಧದ ಹಾಡು..’ ಒಂದು ಕಥೆಯನ್ನು ಹೊರತುಪಡಿಸಿ-ವಾಸ್ತವ ಶೈಲಿಯ ಸೀದಾ ಸಾದಾ ಕಥನಗಳು. ಇಲ್ಲಿನ ನಮಗೆ ಎದುರಾಗುವ ಎಲ್ಲ ಪಾತ್ರಗಳೂ ದಿನನಿತ್ಯದ ಕಷ್ಟ ಕಾರ್ಪಣ್ಯ ಮತ್ತು ಅನಿರೀಕ್ಷಿತವಾಗಿ ಎರಗಿಬರುವ ಆಘಾತಗಳ ಜೊತೆಗೆ ನಮ್ಮ ಕಾಲದ ರಾಜಕೀಯದಲ್ಲಿ ಹಾಸುಹೊಕ್ಕಾಗಿರುವ ಕ್ರೌರ್ಯದ ಜೊತೆಗೆ ಸಹ ಏಗಿಕೊಂಡು ತಾಳಿಕೊಂಡು ಬಾಳುವವರು: ಆದರೆ ಯಾರೂ ಒಂಟಿಯಲ್ಲ. ಸಂಕಲನದ ಎಲ್ಲ ಕತೆಗಳೂ ಊರು ಮನೆಗಳ ಆವರಣವನ್ನೂ ಕಾಲ ದೇಶದ ಸಂದರ್ಭವನ್ನೂ ಕಟ್ಟಿಕೊಂಡೇ ನಮ್ಮೆದುರು ಅನಾವರಣಗೊಳ್ಳುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ. ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ...
READ MORE