'ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ' ಲೇಖಕ ರಾಜಕುಮಾರ ಕುಲಕರ್ಣಿ ಅವರ ಕಥಾಸಂಕಲನ. ಇಲ್ಲಿನ ಎಲ್ಲ ಕಥೆಗಳ ಕೇಂದ್ರಬಿಂದು ಮನುಷ್ಯತ್ವ ಮತ್ತು ಮಾನವೀಯತೆ. ಇಲ್ಲಿನ ಪಾತ್ರಗಳಾದ ಪ್ರೇಮಚಂದ, ದೊಕಾಚಿ, ದಾಮೋದರ, ಪುರುಕಾಕಾ, ದಿಗಂಬರ, ವಾಸುದೇವ, ಅಪ್ಪಣ್ಣ ಇವರೆಲ್ಲ ಮಾನವೀಯತೆಯ ನೆಲೆಯಲ್ಲಿ ಬದುಕನ್ನು ಕಟ್ಟಿಕೊಂಡವರು. ಯಾವ ಮುಖವಾಡವನ್ನು ಧರಿಸದೆ ತೀರ ಸರಳವಾಗಿ ಬದುಕನ್ನು ಅದು ಇದ್ದಂತೆಯೇ ಬದುಕಿದವರು. ‘ನಿರ್ಲಿಪ್ತತೆಯೇ ಹಾಸಿಗೆ ಹಾಸಿಕೊಂಡು ಮಲಗಿದೆಯೇನೋ ಎನ್ನುವಷ್ಟು ಸಪ್ಪೆಯಾಗಿದ್ದ ಮುಖ, ಕಂಪ್ಯೂಟರಿನ ಪರದೆಯ ಮೇಲೆ ಕಣ್ಣು ಕೀಲಿಸಿ ದೃಷ್ಟಿ ಮಂದವಾದ ಕಣ್ಣುಗಳಿಗೆ ಬೆಳಕು ನೀಡಲೆಂಬಂತೆ ಅರ್ಧಮುಖವನ್ನಾವರಿಸಿದ್ದ ದಪ್ಪ ಗಾಜಿನ ಕನ್ನಡಕ, ಕನ್ನಡಕದ ಒಳಗಿನಿಂದ ಕಾಣುತ್ತಿದ್ದ ನಿರ್ಭಾವುಕ ಕಣ್ಣುಗಳು ಯಾವ ಕೋನದಿಂದ ನೋಡಿದರೂ ತನ್ನದು ನೆನಪಿನಲ್ಲಿಟ್ಟುಕೊಳ್ಳಬಹುದಾದ ಚಹರೆ ಅಲ್ಲವೆನಿಸಿ ಪ್ರೇಮಚಂದ ಒಂದುಕ್ಷಣ ಅಧೀರನಾದ’ ಚಹರೆ ಕಥೆಯ ಪ್ರೇಮಚಂದನ ಈ ದಿಗಿಲು ಒಂದು ಹಂತದಲ್ಲಿ ನಮ್ಮೆಲ್ಲರ ದಿಗಿಲಾಗಿ ಕಾಡುತ್ತದೆ. ಒಟ್ಟಾರೆ ನಾಟಕೀಯ ಸಮಾಜದಲ್ಲಿ ತಾವು ಬದುಕಲು ಅರ್ಹರಲ್ಲವೇನೋ ಎಂದು ಆತ್ಮವಿಮರ್ಶೆಗೆ ಒಳಗಾಗುವ ಪಾತ್ರಗಳು ಇಲ್ಲಿನ ಕಥೆಗಳಲ್ಲಿವೆ.
ಲೇಖಕ ರಾಜಕುಮಾರ ಕುಲಕರ್ಣಿ ಅವರು ವೃತ್ತಿಯಿಂದ ಗ್ರಂಥಪಾಲಕರು. ಇವರ ಹಲವಾರು ಕಥೆಗಳು ಕರ್ಮವೀರ, ಮಾನಸ, ಸಿಹಿಗಾಳಿ, ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದು, ಹಲವಾರು ಸಂಘ-ಸಂಸ್ಥೆಗಳಿಂದ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ. ಕೃತಿಗಳು: ಬೇರಿಗಂಟಿದ ಮರ (ಕಥಾ ಸಂಕಲನ) ...
READ MORE