ದೇವರ ಹೊಲ ಮಂಜಯ್ಯ ದೇವರಮನಿ ಅವರ ಕಥೆಸಂಕಲನವಾಗಿದೆ. ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ. ಜೊತೆಗಿಲ್ಲಿ ಬುದ್ಧಿವಾದ ಹೇಳುವ ಇರಾದೆ ಇಲ್ಲದಿರುವುದರಿಂದ ಸನ್ನಿವೇಶಗಳು ಹಾಗೂ ಪಾತ್ರಗಳಿಗೆ ಸಹಜ ನಡಿಗೆಯ ಸೌಭಾಗ್ಯ ದಕ್ಕಿದೆ. ಸಂಕಲನದ ಶೀರ್ಷಿಕೆಯ ಕಥೆʻದೇವರ ಹೊಲʼ ಸಾಂಕೇತಿಕವಾದರೂ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ.
ಮಂಜಯ್ಯ ದೇವರಮನಿ ಮೂಲತಃ ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲ್ಲೂಕಿನ ಸಣ್ಣ ಸಂಗಾಪುರದವರು. ಜನನ 1ನೇ ಫೆಬ್ರವರಿ 1982. ಜಗದಯ್ಯ ದೇವರಮನಿ ಮತ್ತು ಗಿರಿಜಮ್ಮ ದಂಪತಿಗಳ ಕಿರಿಯ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಸಂಗಾಪುರದಲ್ಲಿ, ಪ್ರೌಢ ಶಿಕ್ಷಣವನ್ನು ಉಕ್ಕಡಗಾತ್ರಿಯಲ್ಲಿ ಪೂರೈಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ, ಕುವೆಂಪು ವಿಶ್ವವಿದ್ಯಾಲಯದಿಂದ ಎಂ ಎಡ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪದವಿಧರ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಸೇವೆ ಸಲ್ಲಿಸಿದ ಅನುಭವ. ಸಾಮಾಜಿಕ ಭದ್ರತಾ ಯೋಜನೆಗಳ ...
READ MORE