ಮಂಜಯ್ಯ ದೇವರಮನಿ ಮೂಲತಃ ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲ್ಲೂಕಿನ ಸಣ್ಣ ಸಂಗಾಪುರದವರು. ಜನನ 1ನೇ ಫೆಬ್ರವರಿ 1982. ಜಗದಯ್ಯ ದೇವರಮನಿ ಮತ್ತು ಗಿರಿಜಮ್ಮ ದಂಪತಿಗಳ ಕಿರಿಯ ಪುತ್ರ. ಪ್ರಾಥಮಿಕ ಶಿಕ್ಷಣವನ್ನು ಸಂಗಾಪುರದಲ್ಲಿ, ಪ್ರೌಢ ಶಿಕ್ಷಣವನ್ನು ಉಕ್ಕಡಗಾತ್ರಿಯಲ್ಲಿ ಪೂರೈಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ, ಕುವೆಂಪು ವಿಶ್ವವಿದ್ಯಾಲಯದಿಂದ ಎಂ ಎಡ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪದವಿಧರ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಸೇವೆ ಸಲ್ಲಿಸಿದ ಅನುಭವ. ಸಾಮಾಜಿಕ ಭದ್ರತಾ ಯೋಜನೆಗಳ ಜಾರಿ ತರುವಲ್ಲಿ ವಿಶೇಷ ಆಸಕ್ತಿ.
ಕೃತಿ: "ಕರಿಜಾಲಿ ಮರ" ಪ್ರಕಟಿತ ಕಥಾ ಸಂಕಲನ. "ದೇವರ ಹೊಲ" ಲೇಖಕರ ಎರಡನೇ ಕಥಾ ಸಂಕಲನವಾಗಿದೆ.