ಲೇಖಕ ಕೆ.ಎಸ್. ರವಿಕುಮಾರ್ ಅವರ ’ ಬಿರುಕು ಬಿಟ್ಟಗೋಡೆ ಮತ್ತು ಇತರ ಚೀನಾದ ಪ್ರಾಚೀನ ಕತೆಗಳು’ ಕೃತಿಯು ಕತಾಸಂಕಲನವಾಗಿದೆ. ಈ ಸಂಕಲನದಲ್ಲಿ ಕ್ರಿ.ಪೂ ಏಳನೇ ಶತಮಾನದಿಂದ ಹಿಡಿದು ಕ್ರಿ.ಶ ಐದನೇ ಶತಮಾನದವರೆಗಿನ 1200 ವರ್ಷಗಳ ಅವಧಿಗೆ ಸಂಬಂಧಿಸಿದ ಕತೆಗಳಿವೆ. ಅಂದರೆ ತಮ್ಮ ಕಾಲದ ಚೀನಿಯರ ಭಾವನೆ ಮತ್ತು ಆಲೋಚನಾ ಕ್ರಮಗಳ ಮೇಲೆ ಅವು ತಮ್ಮದೇ ಮಿತಿಯಲ್ಲಿ ಬೆಳಕು ಚೆಲ್ಲುತ್ತವೆ. ತಮ್ಮ ಕಾಲದ ರಾಜಕೀಯ ಏರಿಳಿತಗಳನ್ನು ಟೀಕಿಸುವ ಮತ್ತು ವ್ಯಂಗ್ಯವಾಡುವ ಕೆಲಸ ಮಾಡುತ್ತವೆ. ಈ ಸಂಕಲನದ ಬಹಳಷ್ಟು ಕತೆಗಳು ಒಂದು ಸಂದೇಶದೊಂದಿಗೆ ಅಂತ್ಯಗೊಳ್ಳುತ್ತವೆ.