ಲೇಖಕಿ ಶಾಂತಲಾ ಅವರ ಕಥಾ ಸಂಕಲನ ಕೃತಿ ʻಬಾನಂಚಿನ ಆಚೆʼ. ಇಲ್ಲಿರುವ ಕತೆಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ನಡೆಯುವ ವಿಜ್ಞಾನದ ಹಲವು ಕೂತುಹಲಕಾರಿ ಪರಿಕಲ್ಪನೆಗಳನ್ನು ಸೇರಿಸಿ ಹೆಣೆಯಲಾಗಿದೆ. ಪುಸ್ತಕದ ಬೆನ್ನುಡಿಯಲ್ಲಿ ಲೇಖಕರು ಹೇಳುವಂತೆ, ವೈಜ್ಞಾನಿಕ ಕತೆಗಳನ್ನು ಹಲವರು ಕಟ್ಟುಕತೆ, ಭ್ರಮಾಲೋಕದ ವೃತ್ತಾಂತಗಳು ಎಂದು ನಿರ್ಧರಿಸಿರುತ್ತಾರೆ. ಇನ್ನು ಕೆಲವರಿಗೆ ವಿಜ್ಞಾನವನ್ನು ಕಲಿತವರಿಗೆ ಮಾತ್ರ ಈ ಕಥೆಗಳು ಅರ್ಥವಾಗುತ್ತವೆ ಎಂಬ ತಪ್ಪು ಪರಿಕಲ್ಪನೆ ಇದೆ. ಆದರೆ ಅವುಗಳನ್ನು ಬಹಳ ಸಹಜವೆಂದು, ಅದರ ಹಿಂದಿನ ಶ್ರಮ, ಬೆವರು, ತ್ಯಾಗಗಳನ್ನು ಮರೆತೇ ಹೋಗಿದ್ದೇವೆ! ವಿಜ್ಞಾನದ ಸಾಧ್ಯತೆ ಆಗಾಧ. ಪ್ರತಿದಿನವೂ ಹೊಸ ಪರಿಕಲ್ಪನೆ, ಹೊಸ ಆವಿಷ್ಕಾರ ಆಗುತ್ತಲೇ ಇರುತ್ತದೆ. ಅಂತಹ ಕೆಲವು ಕಲ್ಪನೆಗಳ ಬಗ್ಗೆ ಮತ್ತಷ್ಟು ಚಿಂತಿಸಿ, ಇನ್ನಷ್ಟು ಓದಿ, ತಿಳಿದುಕೊಂಡು, ಕತೆಗಳ ರೂಪದಲ್ಲಿ ತಿಳಿಸಲು ಪ್ರಯತ್ನಿಸಿದ್ದೇನೆ.
ಡಾ. ಶಾಂತಲ ಅವರು ಬೆಂಗಳೂರಿನ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಹಾಗೂ ದೆಹಲಿಯ ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ಪಡೆದಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯಕೀಯ ವಿಷಯಗಳ ಕುರಿತು ಅಂಕಣಗಳನ್ನು ಬರೆಯುತ್ತಾರೆ. ಸೈನ್ಸ್ ಫಿಕ್ಶನ್ ಪ್ರಕಾರವನ್ನು ಹೆಚ್ಚಾಗಿ ಇಷ್ಟಪಡುವ ಶಾಂತಲ ಅವರು ಕಥೆ ಕಾದಂಬರಿಗಳನ್ನು ಬರೆದಿದ್ದಾರೆ. 3019 A.D.-ಎಂಬುದು ಇವರ ಫಿಕ್ಶನ್ ಕಾದಂಬರಿ. . . ...
READ MORE