ಅನುಪಮಾ ನಿರಂಜನ ಅವರ ಸಣ್ಣಕತೆಗಳ ಕತಾಗುಚ್ಛ'ಅಪರೂಪದ ಅತಿಥಿ'. ಈ ಕಥೆಗಳೆಲ್ಲವು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕತೆಗಳಲ್ಲಿ ಹೆಣ್ಣಿನ ಮನೋಲೋಕ, ತುಮುಲವನ್ನು ತೆರೆದಿಟ್ಟಿದ್ದು ಸ್ತ್ರೀವಾದಿ ನೆಲೆಗಟ್ಟಿನಲ್ಲಿ ಬಹುಮುಖ್ಯ ಕತಾಸಂಕಲನ ಇದಾಗಿದೆ.
ವೃತ್ತಿಯಲ್ಲಿ ವೈದ್ಯೆಯಾಗಿದ್ದ ಡಾ. ಅನುಪಮಾ ನಿರಂಜನ ಅವರ ಮೊದಲ ಹೆಸರು ಡಾ.ವೆಂಕಟಲಕ್ಷ್ಮಿ. ಬರವಣಿಗೆಯನ್ನು ಹವ್ಯಾಸ ಮಾಡಿಕೊಂಡಿದ್ದ ಅವರು ’ಅನುಪಮಾ ನಿರಂಜನ’ ಕಾವ್ಯನಾಮದಲ್ಲಿ ಕಾದಂಬರಿಗಳನ್ನು ರಚಿಸಿದ್ದಾರೆ. 1934ರ ಮೇ 17 ರಂದು ತೀರ್ಥಹಳ್ಳಿಯಲ್ಲಿ ಜನಿಸಿದ ಅವರು ಖ್ಯಾತ ಕಾದಂಬರಿಕಾರ ನಿರಂಜನ ಅವರ ಪತ್ನಿ. ಅನುಪಮ ಅವರು ಪ್ರತಿಭಾವಂತ ಬರಹಗಾರ್ತಿ. ಅವರ ಪ್ರಕಟಿತ ಕೃತಿಗಳು ಅನಂತಗೀತೆ, ಸಂಕೋಲೆಯೊಳಗಿಂದ, ಶ್ವೇತಾಂಬರಿ, ನೂಲು ನೇಯ್ದ ಚಿತ್ರ, ಹಿಮದ ಹೂ, ಸ್ನೇಹ ಪಲ್ಲವಿ, ಹೃದಯವಲ್ಲಭ, ಆಕಾಶಗಂಗೆ, ಸಸ್ಯ ಶ್ಯಾಮಲಾ, ಋಣ, ಮೂಡಲ ಪಡುವಣ, ಮಾಧವಿ, ಎಳೆ, ಸೇವೆ, ಕೊಳಚೆ ಕೊಂಪೆಯ ದಾನಿಗಳು, ಇವು ಅವರ ಕಾದಂಬರಿಗಳು. ಕಥಾಸಂಕಲನಗಳು- ...
READ MORE