ಅಂತಃಸ್ವರ

Author : ಮಾಧವಿ ಭಂಡಾರಿ

Pages 160

₹ 120.00




Year of Publication: 2013
Published by: ಮಂದಾರ ಸಾಹಿತ್ಯ
Address: ಪದ್ಮನಾಭನಗರ, ಡಯಾನ ಥಿಯೇಟರ್ ಹಿಂಬದಿ ರಸ್ತೆ, ಉಡುಪಿ- 576101

Synopsys

'ಅಂತಃಸ್ವರ' ಕೃತಿಯು ಮಾಧವಿ ಎಸ್. ಭಂಡಾರಿ ಅವರ ಕಥಾಸಂಕಲನವಾಗಿದೆ. ಇಲ್ಲಿನ ಕಥೆಗಳು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತವೆ. ಮನುಷ್ಯರು ಪರಸ್ಪರರನ್ನು ನಂಬಲಾರದಷ್ಟು ಕಾಲ ಅದು ಹೇಗೋ ಬದಲಾಗಿಬಿಟ್ಟಿದೆ. ಅದಕ್ಕೆ ಕಾರಣ ಯಾರು ಎಂದು ಕೇಳಿಕೊಂಡಾಗ ಇಲ್ಲಿನ ಕಥೆಗಳು ಉತ್ತರ ಹೇಳುತ್ತಿವೆ. ಒಬ್ಬರು ಇನ್ನೊಬ್ಬರತ್ತ ಬೊಟ್ಟು ಮಾಡುವಂತೆಯೇ ಇಲ್ಲ. ಈ ಬ್ರಹ್ಮಾಂಡವೆಂಬ ಬಹುದೊಡ್ಡ ಸಂಸಾರದಲ್ಲಿನ ಪ್ರಪಂಚವೆಂಬ ಭೂಮಿಯ ಮೇಲಿನ ಇನ್ನೊಂದು ಪುಟ್ಟ ಸಂಸಾರಕ್ಕೆ ಸೇರಿದ ಅತಿ ಚಿಕ್ಕ ಸಂಸಾರಗಳೆಂಬ ಮನೆಮನೆಯಲ್ಲಿ ನಡೆದ ಘಟನೆಗಳೇ ಇಲ್ಲಿನ ಈ ಚಿಕ್ಕ ಚಿಕ್ಕ ಕಥೆಗಳು. ನಾವೇ ಸೃಷ್ಟಿಸಿಕೊಂಡ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗದ ಅಸಹಾಯಕತೆ ನಮ್ಮದು. ಎದ್ದುನಿಂತು ಬೆದರಿಸುವ ಸಮಸ್ಯೆ, ಹೆಜ್ಜೆಹೆಜ್ಜೆಗೆ ಹಿಂಬಾಲಿಸುತ್ತಿರುವಾಗ ಈ ಕಥೆಗಳಲ್ಲಿನ ಪಾತ್ರಗಳು ಹೇಗೆ ಸಂದಿಸಿವೆ? ಏನು ಪರಿಹಾರ ಕಂಡುಕೊಂಡಿವೆ? ಇಲ್ಲಿ ಪರಿಹಾರವೇ ಕಾಣದ, ಪ್ರಯತ್ನಿಸಿದರೆ ಸರಿಹೋಗುವ, ತನ್ನಿಂತಾನೇ ಸರಿಪಡಿಸಬಹುದಾದ - ಹಲವಾರು ರೀತಿಯ ಗೊಂದಲದ ಕೌಟುಂಬಿಕ ಕಗ್ಗಂಟುಗಳಿವೆ. ಯಾರೋ ಪರಿಹಾರ ಸೂಚಿಸುತ್ತಾರೆಂದು ಕಾದು ಕುಳಿತುಕೊಳ್ಳದೆ ಮುಖಾಮುಖಿಯಾಗಿ ಎದುರಿಸಬೇಕಾದ ಅಗತ್ಯಗಳನ್ನು ಮನಗಾಣಿಸಿದೆ. ಎಲ್ಲವೂ ನಮ್ಮ ನಿಮ್ಮ ಮನೆಮನೆಯ ಕಥೆಗಳಂತೆ ಭಾಸವಾಗುತ್ತದೆ. 

About the Author

ಮಾಧವಿ ಭಂಡಾರಿ
(01 May 1955)

ಮಾಧವಿ ಭಂಡಾರಿ ಅವರು ರಂಗಭೂಮಿ ಕಲಾವಿದರು, ಸಾಹಿತಿಗಳು, ಕವಯತ್ರಿ. ಹಲವಾರು ರಂಗಳಲ್ಲಿ ತೊಡಗಿಕೊಂಡಿರುವ ಅವರು  'ಸ್ನಾನ' ನಾಟಕದಲ್ಲಿ ಸರಸ್ವತಿ ಪಾತ್ರ, 'ಸಂಧ್ಯಾ-ಛಾಯಾ' ನಾಟಕದಲ್ಲಿ ನಾನಿ ಪಾತ್ರ, 'ನಾಗಮಂಡಲ' ನಾಟಕದಲ್ಲಿ ಕುರುಡವ್ವನ ಪಾತ್ರಗಳನ್ನು ಮಾಡಿದ್ದಾರೆ. 1955 ಮೇ 01 ಜಿಲ್ಲೆಯ ಧಾರೇಶ್ವರದಲ್ಲಿ ಜನಿಸಿದರು. ಇದರೊಂದಿಗೆ ಗುಡ್ಡದ ಭೂತ, ಓ ನನ್ನ ಬೆಳಕೆ ಮತ್ತು ಅಬೋಲಿನಾ ಧಾರವಾಹಿಗಳಲ್ಲಿ ನಟಿಸಿದ್ದಾರೆ. ’ಉತ್ಸವದಿಂದ ಉತ್ಸವಕ್ಕೆ ಕಟ್ಟುವುದು ಬಲುಕಷ್ಟ, ಕನ್ನಡಿಯೊಳಗಿನ ಪ್ರತಿಬಿಂಬ’ ಅವರ ಕವನ ಸಂಕಲನಗಳು. ಗಾಯ ಅವರ ಮತ್ತೊಂದು ಕಥಾಸಂಕಲನ. ಅಂತ್ಯಜ (ವೈದೇಹಿಯವರ ಅಸ್ಪಶ್ಯರು ಕಾದಂಬರಿ ಹಿಂದಿಗೆ), ಚಂದ್ರಕಾಂತಾ (ಹಿಂದಿ ಕಾದಂಬರಿ ಅನುವಾದ), ವಿಚಿತ್ರ ...

READ MORE

Reviews

(ಅಂತಃಸ್ವರ, ಹೊಸತು 2014 ಜನವರಿ, ಪುಸ್ತಕದ ಪರಿಚಯ)

ಕಾಲ ಸಂಪೂರ್ಣವಾಗಿ ಕೆಟ್ಟುಹೋಗಿದೆಯೆಂದು ಹುಯಿಲೆದ್ದಿರುವ ಇಂದಿನ ದಿನಮಾನಗಳ ಬಗ್ಗೆ ಈ ಕಥೆಗಳು ಎಚ್ಚರಿಕೆಯ ಗಂಟೆಯನ್ನು ಬಾರಿಸುತ್ತವೆ. ಮನುಷ್ಯರು ಪರಸ್ಪರರನ್ನು ನಂಬಲಾರದಷ್ಟು ಕಾಲ ಅದು ಹೇಗೋ ಬದಲಾಗಿಬಿಟ್ಟಿದೆ. ಅದಕ್ಕೆ ಕಾರಣ ಯಾರು ಎಂದು ಕೇಳಿಕೊಂಡಾಗ ಇಲ್ಲಿನ ಕಥೆಗಳು ಉತ್ತರ ಹೇಳುತ್ತಿವೆ, ಒಬ್ಬರು ಇನ್ನೊಬ್ಬರತ್ತ ಬೊಟ್ಟು ಮಾಡುವಂತೆಯೇ ಇಲ್ಲ. ಈ ಬ್ರಹ್ಮಾಂಡವೆಂಬ ಬಹುದೊಡ್ಡ ಸಂಸಾರದಲ್ಲಿನ ಪ್ರಪಂಚವೆಂಬ ಭೂಮಿಯ ಮೇಲಿನ ಇನ್ನೊಂದು ಪುಟ್ಟ ಸಂಸಾರಕ್ಕೆ ಸೇರಿದ ಅತಿ ಚಿಕ್ಕ ಸಂಸಾರಗಳೆಂಬ ಮನೆಮನೆಯಲ್ಲಿ ನಡೆದ ಘಟನೆಗಳೇ ಇಲ್ಲಿನ ಈ ಚಿಕ್ಕ ಚಿಕ್ಕ ಕಥೆಗಳು, ನಾವೇ ಸೃಷ್ಟಿಸಿಕೊಂಡ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಾಗದ ಅಸಹಾಯಕತೆ ನಮ್ಮದು. ಎದ್ದುನಿಂತು ಬೆದರಿಸುವ ಸಮಸ್ಯೆ, ಹೆಜ್ಜೆಹೆಜ್ಜೆಗೆ ಹಿಂಬಾಲಿಸುತ್ತಿರುವಾಗ ಈ ಕಥೆಗಳಲ್ಲಿನ ಪಾತ್ರಗಳು ಹೇಗೆ ಸಂದಿಸಿವೆ? ಏನು ಪರಿಹಾರ ಕಂಡುಕೊಂಡಿವೆ? ಇಲ್ಲಿ ಪರಿಹಾರವೇ ಕಾಣದ, ಪ್ರಯತ್ನಿಸಿದರೆ ಸರಿಹೋಗುವ, ತನ್ನಿಂತಾನೇ ಸರಿಪಡಿಸಬಹುದಾದ - ಹಲವಾರು ರೀತಿಯ ಗೊಂದಲದ ಕೌಟುಂಬಿಕ ಕಗ್ಗಂಟುಗಳಿವೆ. ಯಾರೋ ಪರಿಹಾರ ಸೂಚಿಸುತ್ತಾರೆಂದು ಕಾದು ಕುಳಿತುಕೊಳ್ಳದೆ ಮುಖಾಮುಖಿಯಾಗಿ ಎದುರಿಸಬೇಕಾದ ಅಗತ್ಯಗಳನ್ನು ಮನಗಾಣಿಸಿದೆ. ಎಲ್ಲವೂ ನಮ್ಮ ನಿಮ್ಮ ಮನೆಮನೆಯ ಕಥೆಗಳು. ಒಬ್ಬರದಂತೆ ಇನ್ನೊಬ್ಬರ ಹೆಬ್ಬೆರಳ ಗುರುತಿಲ್ಲ - ಆದರೂ ಎಲ್ಲರಿಗೂ ಹೆಬ್ಬೆರಳೆಂಬುದು ಇದೆ ತಾನೆ? ಈ ಕಥೆಗಳೂ ಇಂಥವೇ, ಆಪ್ಪಟ ಭಾರತೀಯ ಬದುಕಿನ ಶೈಲಿಗಳು, ಮೂಲ ಓಡಿಶಾ ಭಾಷೆಯಿಂದ ಕನ್ನಡಕ್ಕೆ ಮಾಧವಿ ಭಂಡಾರಿಯವರ ಅನುವಾದ. 

 

Related Books