‘ಅಂಕುರ’ ಕೃತಿಯು ವಿವೇಕ ಶಾನಭಾಗ ಅವರ ಕಥಾ ಸಂಕಲನವಾಗಿದೆ. ಕೃತಿಯ ಕುರಿತು ಕೆಲವೊಂದು ವಿಚಾರಗಳು ಹೀಗಿವೆ : ಇಲ್ಲಿನ ಲಗ್ನ ಮತ್ತು ಪರಸ್ಪರ ಕತೆಗಳು ದಾಂಪತ್ಯದ ವಿಚಾರವನ್ನು ವಿಶ್ಲೇಷಿಸುತ್ತದೆ. ದಾಂಪತ್ಯಕ್ಕೆ ಹೊರಗಿನ ಒಂದು ವ್ಯಕ್ತಿ ಒದಗಿಸುವ ಸವಾಲು ಎನಿಸುತ್ತದೆ. ಇಲ್ಲಿನ ಕಥೆ-ಅದರ ಗಮನ ತೀರ ಭಿನ್ನವಾದದ್ದು. ಇಲ್ಲಿಯ ಕತೆಗಳಲ್ಲಿ ಕಾಮ ಎದ್ದು ಕಾಣುವ ಅಂಶ; ಹಾಗಾಗಿಯೇ, ಹೊರಬರುವ ತುಡಿತ ಬಿಡುಗಡೆಯಾಗುವಾಗಿನ ತಲ್ಲಣ ಎರಡೂ ಒಳಗೊಂಡಿವೆ.
ವಿವೇಕ ಶಾನಭಾಗ ಅವರು ಉತ್ತರ ಕನ್ನಡ ಜಿಲ್ಲೆಯವರು. ಕನ್ನಡದ ಪ್ರಮುಖ ಕತೆಗಾರರಲ್ಲಿ ಒಬ್ಬರಾದ ವಿವೇಕ ಅವರು 'ದೇಶಕಾಲ' ಎಂಬ ಸಾಹಿತ್ಯಕ ಪತ್ರಿಕೆಯನ್ನೂ ಏಳು ವರ್ಷ ಕಾಲ ನಡೆಸಿದರು. ಹೊಸ ಬಗೆಯ ಕಥೆ ಕಟ್ಟುವ ಅವರು ಸಣ್ಣ ಊರು ಅಥವಾ ವಿಶಾಲ ಜಗತ್ತುಗಳೆರಡರಲ್ಲಿಯೂ ಮನುಷ್ಯರ ಮನಸ್ಸಿನ ಆಯಾಮ ಗುರುತಿಸಬಲ್ಲರು. ಅವರ ’ಘಾಚರ್ ಘೋಚರ್ ನೀಳ್ಗತೆಯ ಇಂಗ್ಲಿಷ್ ಅನುವಾದ ಜಗತ್ತಿನ ಸಾಹಿತ್ಯ ವಲಯದ ಗಮನ ಸೆಳೆದಿದೆ. ಲಂಡನ್, ಅಮೆರಿಕಗಳಲ್ಲಿ ಪ್ರತ್ಯೇಕ ಆವೃತ್ತಿ ಕಂಡಿರುವ ಈ ಕೃತಿ ಜಗತ್ತಿನ 18 ಭಾಷೆಗಳಿಗೆ ಅನುವಾದಗೊಂಡು ಮಚ್ಚುಗೆ ಗಳಿಸಿದೆ. ಅಂಕುರ, ಲಂಗರು, ಹುಲಿಸವಾರಿ, ಮತ್ತೊಬ್ಬನ ...
READ MORE