‘ಅನಿವಾರ್ಯಗಳು’ ಕೇಶವ ಕುಡ್ಲ ಅವರ ಕಥಾಸಂಕಲನವಾಗಿದೆ.ಈ ಸಂಕಲನದಲ್ಲಿರುವ ಕಥೆಗಳು ಒಂದು ನಿಗದಿತ ಕಾಲಾವಧಿಯಲ್ಲಿ ಬರೆದ ಕಥೆಗಳಲ್ಲ. ನಾನು ಬರೆಯುವ ಹವ್ಯಾಸಕ್ಕೆ ಕೈ ಹಾಕಿದ ಹೊಸತರಲ್ಲಿ ಬರೆದ ಕಥೆಗಳೂ ಇವೆ ಇತ್ತೀಚಿನ ದಿನಗಳಲ್ಲಿ ಬರೆದ ಕಥೆಗಳೂ ಇವೆ. ಕಥೆಗಳಲ್ಲಿ ಬಳಸಿದ ವಸ್ತು ವಿಷಯಗಳ ಮರುಕಳಿಕೆಯಾಗಬಾರದೆಂದು ಬೇರೆಬೇರೆ ಕಾಲಘಟ್ಟದಲ್ಲಿ ಬರೆದ ಕಥೆಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಸಂಗ್ರಹಿಸಲಾಗಿದೆ. ಆದರೂ ಇದು ವಿಷಯ ವೈವಿಧ್ಯತೆಗಿಂತ ಹೆಚ್ಚಾಗಿ ನನ್ನ ಆಯಾ ವಯಸ್ಸಿನ ಅನಿಸಿಕೆಗಳ ಮತ್ತು ಗ್ರಹಿಕೆಗಳ ಅನಾವರಣ ಎಂದುಕೊಳ್ಳಬಹುದು.
ಕೇಶವ ಕುಡ್ಲ ಅವರು ಮೂಲತಃ ದಕ್ಷಿಣ ಕನ್ನಡದವರು. ವಿಮಾಕಂಪೆನಿಯಲ್ಲಿ ಮೂರು ದಶಕ ಸೇವೆ ಸಲ್ಲಿಸಿ ನಿವೃತ್ತರಾಗಿರುತ್ತಾರೆ. ಮುಖ್ಯವಾಗಿ ಕೀಟ ಲೋಕದ ಛಾಯಾಗ್ರಹಣ, ಚಾರಣ ಮತ್ತು ಬರವಣಿಗೆ ಅವರ ಪ್ರಿಯ ಹವ್ಯಾಸ. ಇದುವರೆಗೆ 112 ಕಥೆಗಳು ಮತ್ತು ಒಂದು ಕಾದಂಬರಿ ಪ್ರಕಟವಾಗಿರುತ್ತದೆ., 400ಕ್ಕೂ ಹೆಚ್ಚು ಲೇಖನಗಳು ಮತ್ತು ಅದಕ್ಕೆ ಪೂರಕವಾಗಿ ಸುಮಾರು 2000 ಛಾಯಾಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪ್ರಶಸ್ತಿಗಳು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವಾರ್ಷಿಕ ಬಹುಮಾನ, ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಕೃತಿಗಳು: ಒಡಲಾಳದ ಕತೆಗಳು, ಕಥಾ ಪಯಣ’ ...
READ MORE