ಸಿದ್ಧಾರೂಢ ಕಟ್ಟೀಮನಿ ಅವರ ಆಯ್ದ ಕತೆಗಳ ಸಂಕಲನ ‘ಅಂಬೇಡ್ಕರ್ ಕ್ಲಾಸ್’. ಪ್ರಸ್ತುತ ಸಮಾಜದಲ್ಲಿರುವ ಅಸಮಾನತೆ, ಜಾತಿ ದೌರ್ಜನ್ಯ ಮುಂತಾದ ವಿಷಯವಸ್ತುಗಳನ್ನು ಆಧರಿಸಿದ ಕತೆಗಳ ಸಂಕಲನವಾಗಿದೆ. ಈ ಕತಾ ಸಂಕಲನದ ಕುರಿತು ಹಿರಿಯ ಲೇಖಕ ಬಾಳಾಸಾಹೇಬ ಲೋಕಾಪುರ ಅವರು ಬೆನ್ನುಡಿಯಲ್ಲಿ ‘ನಮ್ಮ ಕಾಲದಲ್ಲಿ ಗಾಂಧೀಕ್ಲಾಸ್ ಎನ್ನುವುದು ಸಾಮಾಜಿಕತೆಯ ತಳಪಾಯದಂತೆ ನಮ್ಮ ಕೀಳಿರಿಮೆಯನ್ನು ಮುರಿಯುವ ಶಬ್ದವಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಅಂಕಗಳನ್ನು ಹೆಚ್ಚು ಪಡೆದವನೆ ಸಾಮಾಜಿಕ ಶ್ರೇಣಿಯಲ್ಲಿ ಮೇಲ್ಪದರಿನಲ್ಲಿ ಇರುವ ಅರಿವು ಮೂಡಿ ಗಾಂಧಿಕ್ಲಾಸ್ ಹಿನ್ನೆಲೆಗೆ ಸರಿದು ಅಂಬೇಡ್ಕರ್ ಹಾಗೆ ಹೆಚ್ಚು ಅಂಕ ಪಡೆಯುವುದು ಅನಿವಾರ್ಯವಾಯಿತು. ಅದನ್ನೆ ಇಲ್ಲಿಯ ಕತೆ ಮನನ ಮಾಡಿಕೊಡುತ್ತದೆ’ ಎಂದು ಪ್ರಶಂಸಿಸಿದ್ದಾರೆ.
ಸಿದ್ಧಾರೂಢ ಕಟ್ಟಿಮನಿ ಅವರು ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ತಂದೆ- ಶ್ರೀ ಗುರುನಾಥ ಸಿ ಕಟ್ಟಿಮನಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ- ಶ್ರೀಮತಿ ಶಕುಂತಲಾ ಗು ಕಟ್ಟಿಮನಿ. ಸಿದ್ಧಾರೂಢ ಕಟ್ಟಿಮನಿ ಅವರು ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ, ಫ್ರೌಢ ಶಿಕ್ಷಣ ಮುಗಿಸಿದರು. ಮ್ಯಾಟ್ರಿಕ್ ನಂತರ ಸಾಹಿತ್ಯ ಕೃಷಿ ಆರಂಭವಾಗಿತು. ಪದವಿ ಪೂರ್ವ ಶಿಕ್ಷಣ(ವಿಜ್ಞಾನ), ಸಿಂದಗಿಯಲ್ಲಿ ಪದವಿ(ವಿಜ್ಞಾನ)ಪೂರ್ಣಗೊಳಿಸಿದರು. ಆನಂತರ ಪ್ರೌಢ ಶಿಕ್ಷಕ ತರಬೇತಿ ಪಡೆದು ಪ್ರೌಢ ಶಿಕ್ಷಕ ಸೇವೆ ಆರಂಭಿಸಿದರು. ಪ್ರಥಮ ದರ್ಜೆ ಸಹಾಯಕರಾಗಿ ಹುದ್ದೆಗೆ ನೇಮಕವಾದರು. ಬಾಗಲಕೋಟೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಬೋಧಕೇತರ ವೃತ್ತಿ ಪ್ರಾರಂಭಿಸಿದರು. ...
READ MORE