‘ಆಕಾಶಕ್ಕೆ ನೀಲಿ ಪರದೆ’ ಕೃತಿಯು ಬೊಳುವಾರು ಮಹಮದ್ ಕುಂಞಿ ಅವರ ಕಥಾಸಂಕಲನವಾಗಿದೆ. ಭೂಮಿಯ ಮೇಲೆ ಒಡೆತನ ಮತ್ತು ಅಧಿಕಾರಕ್ಕಾಗಿ ಕಣ್ಣು ಕಿವಿಗಳನ್ನಷ್ಟೇ ಪ್ರಮಾಣವಾಗಿರಿಸಿಕೊಂಡು ನಿನ್ನ ದಿವ್ಯವಾಣಿಯನ್ನು ಅವಿವೇಕದಿಂದ ವಿಚಾರರಹಿತವಾಗಿ ಉದ್ದರಿಸುವವರನ್ನು, ನರಕದ ಕೆಂಡರಾಶಿಯ ಮೇಲೆ ನಿಲ್ಲಿಸು ಎಂಬ ಹಕ್ಕೊತ್ತಾಯದೊಂದಿಗೆ, ಹೊಚ್ಚಹೊಸ ಬಗೆಯ ವಸ್ತು ವೈಶಿಷ್ಟ್ಯಗಳನ್ನು ಈ ಕಥಾಕೃತಿಯು ಒಳಗೊಂಡಿದೆ. ಬೊಳುವಾರು ಅವರ ಬರಹಗಳಲ್ಲಿ ಮನುಷ್ಯನಿರ್ಮಿತ ಎಲ್ಲ ಧರ್ಮಗಳ ಎಲ್ಲೆ ಮೀರುವ ಚಿಂತನೆಗಳು ಸೇರಿಕೊಂಡಿವೆ.
ಕನ್ನಡದ ವಿಶಿಷ್ಟ ಕತೆಗಾರ ಬೊಳುವಾರು ಮಹಮದ್ ಕುಂಞ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ‘ಅತ್ತ, ಇತ್ತಗಳ ಸುತ್ತಮುತ್ತ’. ದೇವರುಗಳ ರಾಜ್ಯದಲ್ಲಿ, ಅಂಕ, ಆಕಾಶಕ್ಕೆ ನೀಲಿ ಪರದೆ, ಒಂದು ತುಂಡು ಗೋಡೆ, ಅವರ ಕಥಾಸಂಗ್ರಹಗಳು. ತಟ್ಟು ಚಪ್ಪಾಳೆ ಪುಟ್ಟ ಮಗು ಅವರು ಸಂಪಾದಿಸಿದ ಮಕ್ಕಳ ಪದ್ಯಗಳ ಸಂಕಲನ. ಜಿಹಾದ್, ಸ್ವಾತಂತ್ರ್ಯದ ಓಟ, ಓದಿರಿ ಅವರ ಕಾದಂಬರಿಗಳು. ಬ್ಯಾಂಕ್ ಉದ್ಯೋಗಿಯಾಗಿ ನಾಲ್ಕು ದಶಕ ಕೆಲಸ ಮಾಡಿ ನಿವೃತ್ತರಾಗಿರುವ ಬೊಳುವಾರರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಗದ್ಯ ಸಾಹಿತ್ಯಕ್ಕೆ ಮುಸ್ಲಿಂ ಬದುಕನ್ನು ಮೊತ್ತ ಮೊದಲು ಪರಿಚಯಿಸಿದ ಇವರು, ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂವೇದನೆ ಎಂಬ ...
READ MORE