‘ಅದೇ ಮುಖ ಮತ್ತುಇತರ ಕಥೆಗಳು’ ಮಾಧವ ಕುಲಕರ್ಣಿ ಅವರ ಕಥಾಸಂಕಲನವಾಗಿದೆ. ಇಂದಿನ ಬಿಡುವಿಲ್ಲದ ಬದುಕಿನ ಮಧ್ಯೆ ಮನೆಮಂದಿಯ ಪರಸ್ಪರ ಸಂಬಂಧಗಳು ಅನಿವಾರ್ಯವಾಗಿ ಹದಗೆಡುವುದನ್ನು ಇಲ್ಲಿನ ಕತೆಗಳು ತಿಳಿಸುತ್ತವೆ.
ಲೇಖಕ, ವಿಮರ್ಶಕ ಮಾಧವ ಕುಲಕರ್ಣಿ ಅವರು ಈಗಿನ ಗದಗ ಜಿಲ್ಲೆ ಮತ್ತು ಆಗಿನ ಧಾರವಾಡ ಜಿಲ್ಲೆಯವರು. ಪ್ರಾಥಮಿಕ ಶಿಕ್ಷಣದಿಂದ ಎಸ್.ಎಸ್.ಎಲ್.ಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ಪೂರೈಸಿರುವ ಅವರು ಹೈಸ್ಕೂಲು ಶಿಕ್ಷಣವನ್ನು ವಿದ್ಯಾದಾನ ಸಮಿತಿ ಹೈಸ್ಕೂಲು ಗದಗದಲ್ಲಿ ಪೂರ್ಣಗೊಳಿಸಿದ್ದಾರೆ. ತಂದೆ ಎ.ವಿ. ಕುಲಕರ್ಣಿ ಗದುಗಿನ ಮುನ್ಸಿಪಲ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿದ್ದರು. ಅಲ್ಲದೇ ಹೈಸ್ಕೂಲು ಶಿಕ್ಷಣದಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ಕೆ.ಎಸ್.ಎಸ್. ಅಯ್ಯಂಗಾರ್ ಅವರ ಆಡಳಿತ ಕ್ರಮ ಮತ್ತು ಶಿಸ್ತು ನನ್ನ ಮೇಲೆ ಪ್ರಭಾವ ಬೀರಿದವು ಎನ್ನುತ್ತಾರೆ ಮಾಧವ ಕುಲಕರ್ಣಿ. ಗದುಗಿನ ಜೆ.ಟಿ. ಕಾಲೇಜಿನಿಂದ ಕಲಾ ವಿಭಾಗದಲ್ಲಿ ಪದವಿ, ಕರ್ನಾಟಕ ವಿಶ್ವವಿದ್ಯಾಲಯದಿಂದ 1968ರಲ್ಲಿ ಸ್ನಾತಕೋತ್ತರ ...
READ MOREಹೊಸತು-2002- ಜನವರಿ
ಇಂದಿನ ಬಿಡುವಿಲ್ಲದ ಬದುಕಿನ ಮಧ್ಯೆ ಮನೆಮಂದಿಯ ಪರಸ್ಪರ ಸಂಬಂಧಗಳು ಅನಿವಾರ್ಯವಾಗಿ ಹದಗೆಡುವುದನ್ನುಅದೇ ಇಲ್ಲಿನ ಕಥೆಗಳು ಎಳೆಎಳೆಯಾಗಿ ಬಿಡಿಸಿಡುತ್ತವೆ. ಮಹತ್ತರವಾದ ಮೌಲ್ಯಗಳಿಗೆ ವಿದಾಯ ಹೇಳುವ ಪ್ರಸಂಗಗಳನ್ನು ತೀರಾ ಸಹಜವೆಂಬಂತೆ ಸ್ವೀಕರಿಸುವ ಮಂದಿಯ ಮುಖಗಳಿಗೆ ಬಹಳ ಸಾಮ್ಯತೆ ಇರುತ್ತದೆ. ಅವೆಲ್ಲ ಮುಖಗಳೂ ಕೆಡುಕಲ್ಲದೆ ಬೇರೇನೂ ಮಾಡಲು ಶಕ್ತವಲ್ಲವೆಂದು ಕತೆಗಳು ಎಚ್ಚರಿಸುತ್ತವೆ.