ತೇಜಸ್ವಿಯವರು ನವ್ಯ ಸಾಹಿತ್ಯದಿಂದ ಸಂಪೂರ್ಣ ವಿಮುಖಗೊಂಡ ಸಂದರ್ಭದಲ್ಲಿ ಬಂದ ಕಥಾ ಸಂಕಲನ ’ಅಬಚೂರಿನ ಪೋಸ್ಟಾಫೀಸು’ (1973). ಈ ಸಂಕಲನಕ್ಕೆ ತೇಜಸ್ವಿ ಬರೆದಿರುವ ಮುನ್ನುಡಿ 'ಪೊಸ ದಿಗಂತದ ಕಡೆಗೆ' ಎಂಬುದು ಆವರೆಗಿನ ಕನ್ನಡ ಸಾಹಿತ್ಯ, ಸಮಾಜ, ತಾತ್ವಿಕತೆ ಚಳವಳಿಗಳ ಹಿನ್ನೆಲೆಯಲ್ಲಿ ವಿಮರ್ಶೆಗೆ ಒಳಪಡಿಸುತ್ತದೆ. ಮತ್ತು ಮುಂದೆ ಕನ್ನಡಕ್ಕೆ ಬೇಕಿರುವ ಸಾಹಿತ್ಯದ ಸ್ವರೂಪವನ್ನೂ ಮಂಡಿಸುತ್ತದೆ. ಈ ಸಂಕಲನದಲ್ಲಿ ಇರುವ ’ಅಬಚೂರಿನ ಪೋಸ್ಟಾಫೀಸು' ಕತೆ ಚಲನಚಿತ್ರವಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ(1973) ಪಡೆದಿದೆ. 'ತಬರನ ಕತೆ' ಆರ್. ನಾಗೇಶ್ ಅವರ ನಿರ್ದೇಶನದಲ್ಲಿ ನಾಟಕವಾಗಿ ಅನೇಕ ಪ್ರಯೋಗಗಳನ್ನು ಕಂಡಿದೆ. ಪುಸ್ತಕ ರೂಪದಲ್ಲಿಯೂ ಪ್ರಕಟವಾಗಿದೆ(1986) ಮತ್ತು ಚಲನಚಿತ್ರವಾಗಿ ಅತ್ಯುತ್ತಮ ಕತೆ ಮತ್ತು ಸಂಭಾಷಣೆಗಾಗಿ ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ (1987) ಪಡೆದಿದೆ. 'ಕುಬಿ ಮತ್ತು ಇಯಾಲ ಚಲನಚಿತ್ರವಾಗಿ ರಾಜ್ಯ ಮತ್ತು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (1990) ಪಡೆದಿದೆ. ಜೊತೆಗೆ 'ತುಕ್ಕೋಜಿ' ಮತ್ತು 'ಅವನತಿ' ಕಥೆಗಳನ್ನು ಒಳಗೊಂಡಿರುವ ಈ ಸಂಕಲನದ ಕಥೆಗಳು ಮರಾಠಿ, ಹಿಂದಿ, ಮಲಯಾಳಂ, ಇಂಗ್ಲಿಷ್ ಭಾಷೆಗಳಿಗೆ ಅನುವಾದಗೊಂಡಿವೆ.
ಕನ್ನಡದ ಹೆಸರಾಂತ ಲೇಖಕ ಕುವೆಂಪು ಅವರ ಪುತ್ರರಾಗಿರುವ ಪೂರ್ಣಚಂದ್ರ ತೇಜಸ್ವಿ ಅವರು 08-09-1938ರದು ಜನಿಸಿದರು. ತಮ್ಮ ಬರವಣಿಗೆಯ ಮೂಲಕವೇ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ’ಚಿದಂಬರ ರಹಸ್ಯ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿರುವ ತೇಜಸ್ವಿ ಅವರು ಕನ್ನಡದಲ್ಲಿ ನವ್ಯ ಸಾಹಿತ್ಯ ಚಳುವಳಿಯು ಉಚ್ಛ್ರಾಯ ಸ್ಥಿತಿಯಲ್ಲಿದ್ದ ದಿನಗಳಲ್ಲಿ ಅದಕ್ಕಿಂತ ಭಿನ್ನವಾದ ನೆಲೆಯ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದರು. ನವ್ಯ ಲೇಖಕರು ನಗರ ಕೇಂದ್ರಿತ, ವ್ಯಕ್ತಿನಿಷ್ಟ ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಬದುಕು ಕುರಿತ ಮತ್ತು ಅದು ಹಳಹಳಿಕೆಯ ಧ್ವನಿಯಲ್ಲಿ ಇರದ ಹಾಗೆ ನೋಡಿಕೊಂಡರು. ಲೋಹಿಯಾ ಚಿಂತನೆಗಳಿಂದ ಪ್ರೇರಿತರಾಗಿದ್ದ ...
READ MOREBOOK REVIEW l ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು | ಅಬಚೂರಿನ ಪೋಸ್ಟಾಫೀಸು |