ಕನ್ನಡದ ಪ್ರಖ್ಯಾತ ಲೇಖಕರಾದ ಕುವೆಂಪು ಅವರ ಒಡನಾಡಿಗಳಾದ ಆನಂದ ಅವರು ತಮ್ಮ ಜೀವಿತಾವಧಿಯಲ್ಲಿ ಒಟ್ಟು 32 ಕಥೆಗಳನ್ನು ರಚಿಸಿದ್ದಾರೆ. ಇದರಲ್ಲಿ 20 ಅವರ ಸ್ವಂತ ಕಥೆಗಳಾದರೆ, ಉಳಿದವು ಅನುವಾದಿತ ಕಥೆಗಳು. ಇವರು ಬರೆದಂತಹ ಎಲ್ಲಾ ಕಥೆಗಳ ಸಂಕಲನವೇ ಈ ಪುಸ್ತಕ. ಆನಂದರು ಬರೆದಂತಹ ಮಾಟಗಾತಿ, ಕೊಂದ ಹುಡುಗಿ, ಜೋಯಿಸರ ಚೌಡಿ ಹೀಗೆ ಹಲವು ಕಥೆಗಳ ಸಮಗ್ರವಾದ ಗ್ರಂಥವನ್ನು ಡಾ. ವಿಜಯಾಹರನ್ ಅವರು ಸಂಪಾದಿಸಿದ್ದಾರೆ.
ಆನಂದ ಅವರು ಬರೆದ ಕಥೆಗಳು ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬದಲ್ಲಿ ನಡೆಯುವಂತಹ ಸನ್ನಿವೇಶಗಳು. ಇಲ್ಲಿನ ಸಂಭಾಷಣೆ ಕೂಡ ಸಾಮಾನ್ಯ ರೀತಿಯಲ್ಲಿದ್ದು, ಅರ್ಥೈಸಿಕೊಳ್ಳಲು ಸುಲಭ. ಅಂತೆಯೇ, ವಿವಿಧ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ ಕಥೆಗಳು ಕೂಡ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ನಿರೂಪಿಸಿರುವು ಅವರ ಭಾಷಾ ಹಿಡಿತಕ್ಕೆ ಹಿಡಿದ ಕೈಗನ್ನಡಿ. ಫ್ರೆಂಚ್, ಡಚ್, ಮರಾಠಿ ಹೀಗೆ ಹಲವು ಭಾಷೆಗಳ ಮೂಲದಿಂದ ಬಂದಂತಹ ಕಥೆಗಳ ಅನುವಾದವನ್ನು ಈ ಪುಸ್ತಕದಲ್ಲಿ ಕಾಣಬಹುದು. ಇಂತಹ ಕಥೆಗಳನ್ನು ವಿವಧ ಮೂಲಗಳಿಂದ ಸಂಗ್ರಹಿಸಿ ಅವುಗಳಿಗೆ ಪ್ರಸ್ತಾವನೆಯನ್ನು ಬರೆದು ಉತ್ತಮ ಗ್ರಂಥವಾಗಿ ಹೊರ ತಂದಿದ್ದಾರೆ ವಿಜಯಾಹರನ್.
ಮೂಲತಃ ಕೋಲಾರ ಜಿಲ್ಲೆಯವರಾದ ಬರಹಗಾರ್ತಿ ಎಂ.ಎಸ್. ವಿಜಯಾ ಹರನ್ ಅವರು ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಳ ಆಕಾಶವಾಣಿಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದವರು. ಮೈಸೂರು, ಮಂಗಳೂರು, ಭದ್ರಾವತಿ, ಗುಲ್ಬರ್ಗ ಹಾಗೂ ಹಾಸನ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಾನುಲಿ ಬೆಳಗು ಕಾರ್ಯಕ್ರಮದ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ಕಾರ್ಯಕ್ರಮಗಳ ಪ್ರಸಾರ, ತರಬೇತಿಗಳನ್ನು ನಡೆಸಿದ್ದಾರೆ. ಆನಂದರ ಬದುಕು ಬರಹ - ಒಂದು ಅಧ್ಯಯನ, ಆಲೋಕ, ಅಜ್ಜಂಪುರ ಸೀತಾರಾಂ, ಸಂಕೇತಿ ಬೇಸಾಯದ ಬದುಕು, ಗಾದೆ ಗದ್ದುಗೆ, ಎಸ್.ಎಲ್. ಭೈರಪ್ಪನವರ ಕಾದಂಬರಿಯಲ್ಲಿ ಗಾದೆಗಳು ಮುಂತಾದ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ...
READ MORE