ಮೂಲತಃ ಕೋಲಾರ ಜಿಲ್ಲೆಯವರಾದ ಬರಹಗಾರ್ತಿ ಎಂ.ಎಸ್. ವಿಜಯಾ ಹರನ್ ಅವರು ಸುಮಾರು ನಾಲ್ಕು ದಶಕಕ್ಕೂ ಹೆಚ್ಚು ಕಾಳ ಆಕಾಶವಾಣಿಯಲ್ಲಿ ಸೇವೆಸಲ್ಲಿಸಿ ನಿವೃತ್ತರಾದವರು. ಮೈಸೂರು, ಮಂಗಳೂರು, ಭದ್ರಾವತಿ, ಗುಲ್ಬರ್ಗ ಹಾಗೂ ಹಾಸನ ಆಕಾಶವಾಣಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಾನುಲಿ ಬೆಳಗು ಕಾರ್ಯಕ್ರಮದ ಮೂಲಕ ಸಮಗ್ರ ಗ್ರಾಮೀಣ ಅಭಿವೃದ್ಧಿಗಾಗಿ ಕಾರ್ಯಕ್ರಮಗಳ ಪ್ರಸಾರ, ತರಬೇತಿಗಳನ್ನು ನಡೆಸಿದ್ದಾರೆ.
ಆನಂದರ ಬದುಕು ಬರಹ - ಒಂದು ಅಧ್ಯಯನ, ಆಲೋಕ, ಅಜ್ಜಂಪುರ ಸೀತಾರಾಂ, ಸಂಕೇತಿ ಬೇಸಾಯದ ಬದುಕು, ಗಾದೆ ಗದ್ದುಗೆ, ಎಸ್.ಎಲ್. ಭೈರಪ್ಪನವರ ಕಾದಂಬರಿಯಲ್ಲಿ ಗಾದೆಗಳು ಮುಂತಾದ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.