ಮರೈಸ್-ಮರಲಿನ್ ದಂಪತಿಗಳ ಕಡಲ ದುರಂತದ ನಿಜಕಥೆ. ಮತೀಯತೆ, ಜಾತೀಯತೆಯಂತಹ ಮಾರಕ ಕಾಯಿಲೆಗಳಿಗೆ ತುತ್ತಾಗುತ್ತಿರುವ ಭಾರತದ ಹೊಸತಲೆಮಾರಿನ ಹುಡುಗ-ಹುಡುಗಿಯರು ಇಂತಹ ಕಥನಗಳನ್ನು ಓದಬೇಕು; ಹೊರಲೋಕದಲ್ಲಿ ಚೈತನ್ಯಶೀಲರಾದ ಮಂದಿ, ಸಂಪ್ರದಾಯದ ಪಂಕದಲ್ಲಿ ಸಿಕ್ಕಿಕೊಳ್ಳದೆ ಹೇಗೆಲ್ಲ ಬದುಕಿನ ಸಾಹಸಗಳನ್ನು ಮಾಡುವುದಕ್ಕೆ ತುಡಿಯುತ್ತಿದ್ದಾರೆಂದು ತಿಳಿಯಬೇಕು. ನಾಡನ್ನು ದ್ವೇಷದಿಂದ ಕಟ್ಟಲು ಸಾಧ್ಯವಿಲ್ಲ. ಜ್ಞಾನ ಸಾಹಸ ಪ್ರಯೋಗ ಕ್ರಿಯಾಶೀಲತೆಯಿಂದ ಮಾತ್ರ ಕಟ್ಟುವುದಕ್ಕೆ ಸಾಧ್ಯ ಎನ್ನುವುದನ್ನು ತಿಳಿಯಿರಿ ಎಂದು ರಹಮತ್ ತರೀಕೆರೆ ಪುಸ್ತಕದ ಹಿನ್ನುಡಿಯಲ್ಲಿ ತಿಳಿಸಿದ್ದಾರೆ.
ಪತ್ರಕರ್ತ, ಬರಹಗಾರ ಗಿರೀಶ್ ತಾಳಿಕಟ್ಟೆ ಅವರು ಜನಿಸಿದ್ದು 1984 ನವೆಂಬರ್ 13ರಂದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ ಕಾವಲು ಇವರ ಹುಟ್ಟೂರು. ಉದ್ಯೋಗ ಸ್ಫೂರ್ತಿ, ಜಾಬ್‌ನ್ಯೂಸ್, ಗೌರಿ ಲಂಕೇಶ್ ವಾರಪತ್ರಿಕೆ ಮೊದಲಾದ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಇವರು ಪ್ರಸ್ತುತ, ಆರಕ್ಷಕ ಲಹರಿ ಮಾಸಪತ್ರಿಕೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗಾಗಿ ಹೊರತರುತ್ತಿದ್ದ ಗೈಡ್ ಮಾಸಿಕದ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹವ್ಯಾಸ ಹಾಗೂ ಆಸಕ್ತಿಯಿಂದ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಟರ್ನಿಂಗ್ ಪಾಯಿಂಟ್ (ವ್ಯಕ್ತಿ ವಿಕಸನ ಬರಹಗಳು), ಕಾಡುವ ಕತೆಗಳು, ನನ್ನ ಕೈಗಂಟಿದ ನೆತ್ತರು (ಅನುವಾದ), ಜೆನ್ ಕಥೆಗಳು, ...
READ MORE