‘15 ಸಣ್ಣ ಕಥೆಗಳು’ ಪ್ರೇಮ, ಪ್ರಣಯ, ದ್ವೇಷ, ಕೊಲೆ, ಆತ್ಮಹತ್ಯೆ ಇದು ಲೇಖಕಿ ಗಾಯತ್ರಿ ರಾಜ್, ಉಷಾ ನರಸಿಂಹನ್, ಹಾಗೂ ಉದಯ್ ಜಾದೂಗಾರ್ ಅವರು ಸೇರಿ ಸಂಕಲನ ಮಾಡಿರುವ ಸಣ್ಣಕಥೆಗಳ ಸಂಕಲನ. ಈ ಕೃತಿಯಲ್ಲಿ ಲೇಖಕ ಉದಯ ಜಾದೂಗಾರ್ ಅವರ ಕುರುಡು ನಂಬಿಕೆ, ಲೇಖಕಿ ಗಾಯತ್ರಿ ರಾಜ್ ಅವರ ಅನ್ನೋನ್, ಉಷಾ ನರಸಿಂಹನ್ ಅವರ ಲಂಗರು, ಉದಯ ಜಾದೂಗಾರ್ ಅವರ ಕೋಮಿನ ಸುಳಿಯಲ್ಲಿ, ಗಾಯತ್ರಿ ರಾಜ್ ಅವರ ಆ ಗಾಯ, ಉಷಾ ನರಸಿಂಹನ್ ಅವರ ಚಿನ್ನದ ಮಿರುಗು, ಉದಯ್ ಜಾದೂಗಾರ್ ಅವರ ಬ್ಯಾಡ್ ಲಕ್, ಗಾಯತ್ರಿ ರಾಜ್ ಅವರ ದೊಡ್ಡಸ್ತಿಕೆ, ಉಷಾ ನರಸಿಂಹನ್ ಅವರ ದೇಜಾಊ, ಉದಯ್ ಜಾದೂಗಾರ್ ಅವರ ಆ ಒಂದು ಪತ್ರ, ಗಾಯತ್ರಿ ರಾಜ್ ಅವರು ಗೀಳು, ಉಷಾ ನರಸಿಂಹನ್ ಅವರ ರೊಟ್ಟಿಯೂ..ಚಂದ್ರನೂ..ಉದಯ ಜಾದೂಗಾರ್ ಅವರ ಸಾಯ್ಲೇಬೇಕಾ, ಗಾಯತ್ರಿ ರಾಜ್ ಅವರ ಅದೃಷ್ಟ, ಉಷಾ ನರಸಿಂಹನ್ ಅವರ ಸಿಂಡ್ರೆಲಾಳೂ..ಅವಳ ಚಪ್ಪಲಿಯೂ ಕತೆಗಳು ಸಂಕಲನಗೊಂಡಿವೆ.
ಲೇಖಕಿ, ಕತೆಗಾರ್ತಿ ಗಾಯತ್ರಿ ರಾಜ್ ಮೂಲತಃ ದಾವಣಗೆರೆಯವರು. ವಿಜ್ಞಾನ ವಿದ್ಯಾರ್ಥಿಯಾದರು ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರ ಕತೆಗಳು ಸುಧಾ, ತರಂಗ, ಕರ್ಮವೀರದಲ್ಲಿ ಪ್ರಕಟಗೊಂಡಿದ್ದು ವಿಜಯಕರ್ನಾಟಕ, ಪ್ರಜಾವಾಣಿ, ಉದಯವಾಣಿಯಲ್ಲಿ ನಿಯಮಿತವಾಗಿ ಲೇಖನ ಪ್ರಕಟಣೆ ಕಾಣುತ್ತಿವೆ. ಸಂಪದ ಸಾಲು ಎಂಬ ಪತ್ರಿಕೆಯಲ್ಲಿ ಒಂದು ವರ್ಷದಿಂದ "ಹೆಣ್ಣೆ ಬದುಕು ಸುಂದರ ಕಣೆ" ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಅವರ ಕತಾ ಸಂಕಲನ ‘ಬಣ್ಣದ ಜೋಳಿಗೆ’ ಇತ್ತಿಚೆಗೆ ಪ್ರಕಟವಾಗಿದೆ. ...
READ MORE