ನಾಗರಾಜ ವಸ್ತಾರೆ ಅಂತಲೇ ಪರಿಚಿತರಾಗಿರುವ ನಾಗರಾಜ ರಾಮಸ್ವಾಮಿ ವಸ್ತಾರೆ ಅವರು ವೃತ್ತಿಯಲ್ಲಿ ಆರ್ಕಿಟೆಕ್ಟ್ ಆಗಿದ್ದು, ಸಾಹಿತ್ಯವನ್ನು ಪ್ರವೃತ್ತಿಯಾಗಿಸಿಕೊಂಡವರು. ಕಥೆ, ಕಾದಂಬರಿ, ಕವಿತೆ, ಪ್ರಬಂಧ ಹೀಗೆ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆಮನೆ ಕಥೆ, ಬಯಲು-ಆಲಯ, ಕಮಾನು-ಕಟ್ಟುಕತೆ ಹೆಸರಿನಲ್ಲಿ ಇವರ ಅಂಕಣಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ವಸ್ತಾರೆ ಅವರ ಪ್ರಮುಖ ಕೃತಿಗಳೆಂದರೆ ತೊಂಬತ್ತನೇ ಡಿಗ್ರಿ, ಅರ್ಬನ್ ಪ್ಯಾಂಥರ್‍ಸ್, ನಿರವಯವ ಮುಂತಾದವು.ಇವರಿಗೆ ಪುತಿನ ಕಾವ್ಯ ನಾಟಕ ಪುರಸ್ಕಾರ, ಕನ್ನಡ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.