ನಟ, ನಿರ್ದೇಶಕ ಕೌಶಿಕ್ ರತ್ನ ಅವರು ಮೂಲತಃ ಸಕಲೇಶಪುರ ತಾಲೂಕಿನ ಹನಸೆ ಊರಿನವರು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬಿಕಾಂ ಪದವೀಧರರಾದ ಇವರು ರಂಗಭೂಮಿ ಮತ್ತು ಸೀರಿಯಲ್, ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ
ಬೆಂಗಳೂರಿನ ದೃಶ್ಯ ರಂಗ ತಂಡದಲ್ಲಿದ್ದುಕೊಂಡು ವಿವಿಧ ನಾಟಕಗಳಲ್ಲಿ ಅಭಿನಯ ಮಾಡಿದ್ದಾರೆ. ನಂತರ ಕೆಲವು ಸೀರಿಯಲ್ಸ್, ಸಿನಿಮಾಗಳಲ್ಲಿ ಅಭಿನಯ ಮಾಡುತ್ತಾ ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿದ್ದಾರೆ. ಪ್ರಸ್ತುತ ರತ್ನ ಪಿಚ್ಚರ್ಸ್ ಎಂಬ ಸಂಸ್ಥೆ ಕಟ್ಟಿ "ಇಲ್ಲೀಗಲ್" ಹೆಸರಿನ ಸಿನಿಮಾ ಮಾಡುವ ಉದ್ದೇಶದಿಂದ ಕ್ರೌಡ್ ಫಂಡ್ ಮಾಡಲು "ನಿಧಿ" ಎಂಬ ಕಥಾ ಸಂಕಲನವನ್ನು ಬರೆದಿದ್ದಾರೆ.