ವೈಚಾರಿಕ ಬರಹಗಾರ ಎಸ್. ಬಿ. ಜೋಗುರ ಅವರುಕಥೆಗಳನ್ನೂ, ಕಾದಂಬರಿ, ಲೇಖನಗಳನ್ನು ಬರೆದಿದ್ದಾರೆ.ಇವರ ನಿದರ್ಶನ' ಕಾದಂಬರಿಯು ಒಂದು ಕುಟುಂಬದ ಮೂರು ತಲೆಮಾರಿನ ಬದುಕನ್ನು ಕೇವಲ 147 ಪುಟಗಳಲ್ಲಿ ಅನಾವರಣಗೊಳಿಸಿದ ಕಾದಂಬರಿಯಾಗಿದೆ. ಅಸ್ಪಶ್ಯತೆಯೆಂಬ ವಿಷ ಕೂಸಿನ ಸುತ್ತ, ಓಡಿ ಹೋದ ಹುಡುಗ ಮರಳಿ ಬಂದ ಕಥೆ, ‘ಅಂತರಾಳದ ಮಾತು, ಇರದೇ ತೋರುವ ಬಗೆ’ ಅವರ ಮತ್ತೆರಡು ಕೃತಿಗಳು.
ಕತೆಗಾರ ಮತ್ತು ಪತ್ರಕರ್ತ ಎಸ್. ಬಿ. ಜೋಗುರ ಅವರು ಮೂಲತಃ ಸಿಂದಗಿಯವರು. ಧಾರವಾಡದಲ್ಲಿ ನೆಲೆಸಿದ್ದರು. ‘ಮುಗ್ಗಲು ಮನಸಿನ ಪದರು’ ಅವರ ಕತಾ ಸಂಕಲನ. ಸಿಂದಗಿಯಲ್ಲಿ ‘ಜೋಗುರ ಪತ್ರಿಕೆ’ ನಡೆಸುತ್ತಿದ್ದರು. ಕಾರವಾರದ ಕರಾವಳಿ ಮುಂಜಾವು ಪತ್ರಿಕೆ ವರದಿಗಾರರಾಗಿ, ಅಂಕಣಕಾರರಾಗಿ, ವಿಷ್ಣು ನಾಯಕರ ರಾಘವೇಂದ್ರ ಪ್ರಕಾಶನದ ಸಹಾಯಕರಾಗಿ ದುಡಿದಿದ್ದು ಧಾರವಾಡದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಶಾಸ್ತ್ರ ಪ್ರಾಧ್ಯಾಪಕರಾಗಿದ್ದರು. ಅವರು 2019ರಲ್ಲಿ ನಿಧನರಾದರು.