ಶ್ರೀರಂಗ ಪುರಾಣಿಕ್ ಅವರು ವಿಜಯಪುರದವರು. ರಾಜ್ಯಶಾಸ್ತ್ರ ವಿಷಯದಲ್ಲಿ M.A ಸ್ನಾತಕೋತ್ತರ ಪದವಿಯನ್ನು ರಾಣಿಚನ್ನಮ್ಮ ವಿಶ್ವವಿದ್ಯಾಲಯದಿಂದ ಪಡೆದುಕೊಂಡಿದ್ದಾರೆ. ಸಾಹಿತ್ಯ, ರಂಗಭೂಮಿ,ಕಿರುಚಿತ್ರ, ಆಧ್ಯಾತ್ಮ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕನ್ನಡದ ದಿನಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ವಿಜಯ ಕರ್ನಾಟಕ, ಪ್ರಜಾವಾಣಿ, ವಿಜಯವಾಣಿ, ವಿಶ್ವವಾಣಿ, ಕನ್ನಡ ಪ್ರಭ, ಉದಯವಾಣಿ, ಪತ್ರಿಕೆಗಳಲ್ಲಿ ಲೇಖನ,ಕವನ ,ಹನಿಗವನ, ಚುಟುಕು, ಸಣ್ಣ ಕಥೆಗಳು ಮುಂತಾದವುಗಳು ಪ್ರಕಟಣೆಯಾಗಿವೆ. ಜೊತೆಗೆ ವಾರ ಪತ್ರಿಕೆ , ಮಾಸ ಪತ್ರಿಕೆಗಳಾದ ಕರ್ಮವೀರ, ತರಂಗ, ಮಾನಸ, ವಿಕ್ರಮ, ನಯನ, ಮುಂತಾದ ನಿಯತಕಾಲಿಕೆಗಳಲ್ಲೂ ಪ್ರಕಟಗೊಂಡಿದೆ.
ಹನಿಹನಿ ಇಬ್ಬನಿಯ , ಮಾನಸ, ಸಮರ್ಥ ಸಾಹಿತ್ಯ ಬಳಗ, ವೀರೇಶ್ವರ ವೇದಿಕೆ , ಕನ್ನಡ ಕಸ್ತೂರಿ ಸಾಹಿತ್ಯ ಬಳಗ, ಹುಮನಾದ ಸಾಹಿತ್ಯ ವೇದಿಕೆ , ಇನ್ನು ಮುಂತಾದ ಕನ್ನಡ ಸಾಹಿತ್ಯ ಸಂಘಗಳು ಹೊರತಂದಿರುವ ಕವನ ಸಂಕಲನದಲ್ಲಿ ಶ್ರೀರಂಗ ಪುರಾಣಿಕ್ ಅವರ ಕವನಗಳು ಮುದ್ರಣವಾಗಿವೆ.