ಲೇಖಕ ರಾಜೇಂದ್ರ ಬಿ. ಶೆಟ್ಟಿ ಅವರ ಕಥಾಸಂಕಲನ ಕೃತಿ ʼಕಥನ ಕುತೂಹಲʼ. ಪುಸ್ತಕದಲ್ಲಿ ಸಣ್ಣ ಹಾಗೂ ದೀರ್ಘ ಕತೆಗಳೂ ಇವೆ. ಇವುಗಳೆಲ್ಲವು ಸರಳ ರೂಪದಲ್ಲಿವೆ. ಕತೆಗಳಲ್ಲಿ ಬರುವ ಹೆಚ್ಚಿನ ಸಂದರ್ಭಗಳು ಮೇಲ್ನೋಟಕ್ಕೆ ಭೂತ, ಪ್ರೇತ, ದೆವ್ವ ಎಂಬಂತೆ ಕಾಲ್ಪನಿಕ ವಿಷಯವಾಗಿ ಕಂಡರೂ ಮುಂದೆ ಓದುತ್ತಾ ಅವುಗಳು ಸತ್ಯ ಘಟನೆಗಳಂತೆ ತೋರುತ್ತವೆ. ಸಣ್ಣ ಕಥೆಗಳಲ್ಲಿಯೂ ರೋಚಕತೆ, ನೀತಿಪಾಠಗಳು, ಹಾಗೂ ಜೀವನಾನುಭವಗಳನ್ನು ಇಲ್ಲಿ ಪಡೆಯಬಹುದಾಗಿದೆ. ಹಾಗಾಗಿ ಪುಸ್ತಕದಲ್ಲಿರುವ ಪ್ರತಿಯೊಂದು ಕಥೆಗಳೂ ದುಗನಿಗೆ ಒಳ್ಳೆಯ ಅನುಭವ ನೀಡುವಂಥವು.
ಲೇಖಕ ರಾಜೇಂದ್ರ. ಬಿ.ಶೆಟ್ಟಿ ಅವರು ಉಡುಪಿ ಜಿಲ್ಲೆಯ ಹೆಜಮಾಡಿಯವರು. ಸುರತ್ಕಲ್ಲಿನ ಕೆ. ಆರ್. ಈ. ಸಿ. ಯಲ್ಲಿ( ಈಗಿನ ಎನ್ ಐ ಟಿ ಕೆ ) ಇಂಜಿನಿಯರಿಂಗ್ ಪದವೀಧರರು. ಸುಮಾರು ನಲುವತ್ತು ವರ್ಷ ಬೇರೆ ಬೇರೆ ಊರುಗಳಲ್ಲಿ( ಮುಂಬೈ, ಬೆಂಗಳೂರು, ಜಯಪುರ ಮತ್ತು ಅಸನ್ ಗಾಂವ್ )ಕೆಲಸ ಮಾಡಿ ಈಗ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಶಾಲಾ ದಿನಗಳಲ್ಲಿ ಕಥೆ ಬರೆಯಲು ಆರಂಭಿಸಿದ್ದು,ಕಾಲೇಜು ದಿನಗಳಲ್ಲಿ ಅವು ಮುಂಬೈ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ಕೃತಿಗಳು: ' ನನ್ನದೂ ಒಂದಿಷ್ಟು...'( 2018), ' ಕಥನ ಕುತೂಹಲ '(2021) ಪ್ರಕಟಗೊಂಡಿದೆ. ...
READ MORE