ಬೈಂದೂರು ತಾಲೂಕಿನ ಯಡ್ತರೆ ಗ್ರಾಮದಲ್ಲಿ ದಿ. ರಾಮನಾವಡ ಮತ್ತು ದಿ. ಗೋದಾವರಿ ಅವರ ಪುತ್ರನಾಗಿ 10-09-1965ರಲ್ಲಿ ಜನಿಸಿದರು . 1990ರಲ್ಲಿ ಆರ್ಮಿ ಎಜುಕೇಶನಲ್ ಕೋರ್ ಗೆ ಬೋಧಕರಾಗಿ ಸೇವೆ ಪ್ರಾರಂಭಿಸಿದರು. ಭಾರತೀಯ ಸೇನೆಯ 22 ವರ್ಷದ ಸೇವಾವಧಿಯಲ್ಲಿ ಉಗ್ರವಾದಗ್ರಸ್ತ ಜಮ್ಮು ಕಾಶ್ಮೀರದ ಉಚ್ಚತುಂಗ ಪ್ರದೇಶಗಳಲ್ಲೂ, ಸೇನೆಯ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಾದ ಆರ್ಮಿ ಎಜುಕೇಶನಲ್ ಕೋರ್ ಟ್ರೈನಿಂಗ್ ಕಾಲೇಜ್ ಪಚಮಡಿ (ಮಧ್ಯಪ್ರದೇಶ.) ಮತ್ತು ಆರ್ಟಿಲರಿ ಟ್ರೈನಿಂಗ್ ಸೆಂಟರ್ ಹೈದರಾಬಾದ್‍ನಲ್ಲೂ ಸೇವೆ ಮಾಡಿ ಜಮ್ಮು ಕಾಶ್ಮೀರದಲ್ಲಿ `ಅಪರೇಶನ್ ರಕ್ಷಕ್’ ಮತ್ತು ಕಾರ್ಗಿಲ್ ಸಂಘರ್ಷದ `ಅಪರೇಶನ್ ವಿಜಯ್’ ದಲ್ಲಿ ಸಕ್ರಿಯವಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆಫ್ರಿಕಾದ ಕಾಂಗೋ ಗಣರಾಜ್ಯದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ವಿದೇಶ ಸೇವೆ ಮತ್ತು 2012 ರಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದರು. ಪ್ರಸ್ತುತ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಬೈಂದೂರು ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಕ್ಷಣೆ, ವಿದೇಶಾಂಗ ನೀತಿ, ಬ್ಯಾಂಕಿಂಗ್ ಸಂಬಂಧಿಸಿದ ಲೇಖನಗಳು, ಕಥೆ, ವಿಮರ್ಶೆ, ಲಘು ಬರಹಗಳು, ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ.
ಪ್ರಕಟಿತ ಕೃತಿಗಳು : ಸೇ ನಾನುಭವ, ಮಹಾನ್ ಸೇನಾನಿ ಜ.. ಬಿಪಿನ್ ರಾವತ್, ಸೈನಿಕನ ಆಂತರ್ಯದ ಪಿಸು ನುಡಿ.