ವೈ.ಸತ್ಯನಾರಾಯಣ ಅವರ ತಾಯಿ ಪರಮೇಶ್ವರಿ, ತಂದೆ ವೈ.ಪರಮೇಶ್ವರ್. ಎಂ.ಎ, ಎಂ.ಎಡ್ ಪದವೀಧರರಾಗಿರುವ ಇವರು 1960ರಿಂದ 1968ರ ವರೆಗೆ ಕೆಳದರ್ಜೆ ಗುಮಾಸ್ತನಾಗಿ ಸೇವೆ ಸಲ್ಲಿಸಿದ್ದಾರೆ. 1968ರಿಂದ 1996ರ ವರೆಗೆ ಪ್ರೌಢಶಾಲಾ ಶಿಕ್ಷಕ, 1996ರಿಂದ 1999ರ ವರೆಗೆ ಆಂಗ್ಲ ಮಾಧ್ಯಮ ಪ್ರೌಢಶಾಲಾ ಮುಖ್ಯೋಪಾಧ್ಯಾಯ. ಅನಂತರ ಅಲ್ಪ ಸಮಯ ಬಿ.ಎಡ್. ಕೇಂದ್ರದಲ್ಲಿ ಅತಿಥಿ ಉಪನ್ಯಾಸಕನಾಗಿ ಸೇವೆ ಸಲ್ಲಿಸಿದ್ದಾರೆ.
ಸಾಹಿತ್ಯ : 2002ರಲ್ಲಿ ನೌಕರಿಯಿಂದ ಸಂಪೂರ್ಣವಾಗಿ ನಿವೃತ್ತನಾದ ಮೇಲೆ ಸಾಹಿತ್ಯ ಕೃಷಿ ಆರಂಭಿಸಿ, ನಗೆ ಹನಿಗಳಿಂದ ಬರವಣಿಗೆ ಪ್ರಾರಂಭಿಸಿದರು. ಈವರೆಗೆ 11 ಕೃತಿಗಳನ್ನು ಬರೆದು ಪ್ರಕಟಿಸಿದ್ದರೆ ಮೊದಲನೆಯ ಕೃತಿ ಪುನರ್ ಮುದ್ರಣಗೊಂಡಿದೆ. 05-10-2019ರಂದು ‘ಹಾಸ್ಯ ತಪಸ್ವಿ’ ಎಂಬ ಅಭಿನಂದನಾ ಗ್ರಂಥವನ್ನು ಇವರಿಗಾಗಿ ಅರ್ಪಿಸಿದ್ದಾರೆ. ಹಲವಾರು ದಿನಪತ್ರಿಕೆ, ವಾರಪತ್ರಿಕೆ, ಮಾಸಿಕ, ವಿಶೇಷಾಂಕಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ.