ಕಟ್ಟೆ ಪುರಾಣ ಜನಪ್ರಿಯ ಅಂಕಣದ ಮೂಲಕ ಚಿರಪರಿಚಿತರಾದ ಲಂಕೇಶ್ ಪತ್ರಿಕೆ ಬಹಗಾರರಾಗಿದ್ದ ಬಿ. ಚಂದ್ರೆಗೌಡರು ಮಂಡ್ಯ ಜಿಲ್ಲೆಯ ನಾಗಮಂಗಲದವರು. ಪಿ. ಲಂಕೇಶರ ಪತ್ರಿಕೆಯಲ್ಲಿ ವರದಿಗಾರರಾಗಿ ಹಾಗೂ ಅಂಕಣಕಾರರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಮುಖ ಕೃತಿಗಳು: ಹೊಸ ಹೆಜ್ಜೆಗಳು, ಹೊಸಳ್ಳಿ ವೃತ್ತಾಂತ, ಲೈಬ್ರರಿಯಲ್ಲಿ ಕಂಡ ಮುಖ (ಕಾದಂಬರಿ), ಹಳ್ಳಿಕಾರನ ಅವಸನ (ಕಥಾ ಸಂಕಲನ), ಜಬೀವುಲ್ಲ ಕೊಟ್ಟಕೋಳಿ, ಕಟ್ಟೆ ಪುರಾಣ ಭಾಗ-1, ಕಟ್ಟೆ ಪುರಾಣ ಭಾಗ-2, ಬಾಹುಬಲಿ ಬುಡದಲ್ಲಿ ಜನಸಾಗರ, ನಾವು ನಾಟಕ ಆಡಿದ್ದೂ (ಹಾಸ್ಯ ಸಂಕಲನ), ಕಟ್ಟೆ ಪುರಾಣ, ಕಡಿದಾಳು ಶಾಮಣ್ಣ, ಧನ್ವಂತರಿ ಚಿಕಿತ್ಸೆ, ಕಲ್ಲು ಕರಗುವ ಸಮಯ, ಚಿನ್ನದ ಚೆಂದಿರ (ನಾಟಕ), ಪುಣ್ಯ ಕೋಟಿ ಎಂಬ ಕೃಷ್ಣಪ್ಪ, ನಮ್ಮ ಶಾಮಣ್ಣ, ಗಾಂಧಿವಾಧಿ ಸುಬ್ರಹ್ಮಣ್ಯ ಶೆಟ್ಟರು (ಸಂಪಾದಿತ) ಮುಂತಾದವು.