ಕಾದಂಬರಿಕಾರ, ಕತೆಗಾರ ವೈ. ಎಸ್. ಹರಗಿ ಮೂಲತಃ ರೋಣ ತಾಲ್ಲೂಕಿನ ಹುಲ್ಲೂರಿನವರು. 1999ರಲ್ಲಿ ಕೆ. ಪಿ. ಎಸ್. ಸಿ. ಮುಖಾಂತರ ನೇರ ನೇಮಕಾತಿ ಹೊಂದಿ ನಂಜನಗೂಡು ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ‘ಉರಿವ ಜಲ’ ಕಾದಂಬರಿಗೆ 2014ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ಚದುರಂಗ ದತ್ತಿ ನಿಧಿ) ಪ್ರಶಸ್ತಿಗಳು ದೊರೆತಿವೆ. ಕವಡೆಪುರದ ಕೌರವರು, ಸ್ವಪ್ನಗೆಜ್ಜೆ, ಕವಡೆಪುರದ ಕೌರವರು(ಕಾದಂಬರಿ), ಮೂಕ ಹಕ್ಕಿ ನಕ್ಕಾಗ, ಬಾರಪ್ಪಾ ಬಾರೋ ಮಳೆರಾಯ, ದೇವ್ರು ಬರ್ತಾನೆ ದಾರಿಬಿಡಿ (ಕಥಾ ಸಂಕಲನ), ಮ್ಯಾಕ್ಸ್ ಮುಲ್ಲರ್ (ಜೀವನ ಚರಿತ್ರೆ), `ಕಲ್ಲರಳಿ ಹೂವಾಗಿ’ ಅವರ ಪ್ರಕಟಿತ ಕೃತಿಗಳು.